ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ವಿಜೃಂಭಣೆಯಿಂದ ನೆಡೆದ ಆಂಜನೇಯಸ್ವಾಮಿ ಕಾರ್ತಿಕತ್ಸೋವದ ರಥೋತ್ಸವ ಸಂಭ್ರಮ

ಚಳ್ಳಕೆರೆ: ಗ್ರಾಮೀಣ ಪ್ರದೇಶದ ಜಾನಪದ ಶೈಲಿಯ ತಮಟೆ ಉರುಮೆ ನಂದಿಕೋಲು ಕಲಾತಂಡಗಳೊಂದಿಗೆ ಶ್ರೀ ಆಂಜನೇಯಸ್ವಾಮಿ ರಥೋತ್ಸವ ಜರುಗಿತು. ತಾಲ್ಲೂಕಿನ ಓಬಯ್ಯನಹಟ್ಟಿ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೇವಾ ಶ್ರೀ ಆಂಜನೇಯಸ್ವಾಮಿ ಕಾರ್ತಿಕತ್ಸೋವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಬೆಳಿಗ್ಗೆ 8:00ಯಿಂದಲೇ ಬಣ್ಣ ಬಣ್ಣದ ಬಾವುಟಗಳಿಂದ ಹೂವಿನ ಹಾರಗಳಿಂದ ರಥವನ್ನು ಶೃಂಗಾರ ಮಾಡಲಾಯಿತು. ಮಧ್ಯಾಹ್ನ 2 ಗಂಟೆಗೆ ಶ್ರೀ ಆಂಜನೇಯಸ್ವಾಮಿ ಉತ್ಸವ ಮೂರ್ತಿಯನ್ನು ರಥದಲ್ಲಿ ಸಕಲ ಪೂಜಾ ವಿಧಿ ವಿಧಾನಗಳಿಂದ ಪ್ರತಿಷ್ಠಾಪಿಸಲಾಯಿತು. ಶ್ರೀ ಆಂಜನೇಯಸ್ವಾಮಿ ರಥೋತ್ಸವಕ್ಕೆ ಗ್ರಾಮದ ಗೂಲ್ಲರಹಟ್ಟಿ ಪೂಜಾರಿ ನಾಗೇಂದ್ರ ವಂಶಸ್ಥರ ಮನೆಯಿಂದ ಬಲಿ ಅನ್ನ ತರಲಾಯಿತು ಕಾಸು ಮೀಸಲು ಮೊಸರು ತುಂಬಾ ಜಿನಿಗಿ ಹಾಲು ತಂದು ಶ್ರೀ ಆಂಜನೇಯಸ್ವಾಮಿ ರಥದ ಗಾಲಿಗಳಿಗೆ ಎಡೆ ಹಾಕಲಾಯಿತು.

ನಂತರ ಮಹಾಮಂಗಳಾರತಿ ನೆರವೇರಿಸಿ ಗ್ರಾಮಸ್ಥರು ರಥಕ್ಕೆ ಚಾಲನೆ ನೀಡಿದರು.

.

Edited By : PublicNext Desk
Kshetra Samachara

Kshetra Samachara

28/12/2024 05:59 pm

Cinque Terre

2.8 K

Cinque Terre

0

ಸಂಬಂಧಿತ ಸುದ್ದಿ