ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ಭೀಕರ ಕೃತ್ಯಗಳಿಂದ ಕಲುಷಿತವಾಗುತ್ತಿರುವ ಸಮಾಜಕ್ಕೆ ಸಾಹಿತ್ಯ ಚಿಂತನೆ ಅಗತ್ಯ

ಚಳ್ಳಕೆರೆ: ಕೆಲ ಭೀಕರ ಕೃತ್ಯಗಳಿಂದ ಕಲುಷಿತವಾಗುತ್ತಿರುವ ಸಮಾಜಕ್ಕೆ ಸಾಹಿತ್ಯ ಚಿಂತನೆ ಅಗತ್ಯ ಇದೆ ಎಂದು ಕನ್ನಡ ಸಂಸ್ಕೃತಿ ಸಂಸ್ಥೆಯ ಅಧ್ಯಕ್ಷರು ಹಾಗೂ ಸಾಹಿತಿಗಳಾ ಕೊರ್ಲಕುಂಟೆ ತಿಪ್ಪೇಸ್ವಾಮಿ ಹೇಳಿದರು.

ಚಳ್ಳಕೆರೆ ನಗರದ ರೋಟರಿ ಬಾಲ ಭವನದಲ್ಲಿ ಭಾನುವಾರ ಕೊರ್ಲಕುಂಟೆ ಗ್ರಾಮದ ಕನ್ನಡ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಹಮ್ಮಿಕೊಂಡದ್ದ ಕುವೆಂಪು ಜನ್ನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸರ್ವಜನಾಂಗದ ಶಾಂತಿಯ ತೋಟದಂತೆ ಸಮಾಜವನ್ನು ನೋಡಬೇಕಿದೆ ಎಂದು ಬಯಸಿದ ಮಹನೀಯರ ಚಿಂತನೆಯನ್ನು ಅನಾವರಣ ಮಾಡುವ ಜಾಗೃತಿ ಬೆಳೆಯಬೇಕಿದೆ ಎಂದರು.

ಚಳ್ಳಕೆರೆ ನಿವೃತ್ತ ತಹಸಿಲ್ದಾರ್ ಎನ್. ರಘುಮೂರ್ತಿ ಮಾತನಾಡಿ ಕುವೆಂಪು ಅವರಿಗೆ ವಿದ್ಯಾ ಗುರುಗಳಾಗಿದ್ದ ತಳುಕಿನ ವೆಂಕಣ್ಣಯ್ಯ ನೆಲೆಯಲ್ಲಿ ಶಿಷ್ಯ ಕುವೆಂಪು ಅವರ ಸಾಹಿತ್ಯ ಕುರಿತು ಮಾತನಾಡುವುದು ಒಂದು ಇತಿಹಾಸ ಅನಿಸುತ್ತದೆ. ಸಮಾಜದ ಮಹನೀಯರ ಜಯಂತಿ ಕಾರ್ಯಕ್ರಮಗಳು ಕೇವಲ ಸಾಂಕೇತಿಕ ಆಗಬಾರದು. ಬಸವಣ್ಣರ ವಚನ, ಕುವೆಂಪು ಅವರ ಕವನ, ಕನಕದಾಸರ ಕೀರ್ತನೆ, ಡಿ.ವಿ.ಗುಂಡಪ್ಪರ ತತ್ವಗಳನ್ನು ಮನನ ಮಾಡಿಕೊಂಡು ಅಭಿವ್ಯಕ್ತ ಪಡಿಸಬೇಕು. ಸಾಹಿತ್ಯ ವಿಚಾರವನ್ನು ಮನ ಮತ್ತು ಮನೆಗಳಿಗೆ ಕೊಂಡೊಯ್ಯವ ಕೆಲಸ ಆಗಬೇಕು. ಮನೆಯಲ್ಲಿ ಕವಿಗಳ ಬರಹ ಕುರಿತು ಮಾತನಾಡುವ ಸಂಸ್ಕೃತಿ ಬೆಳೆಯಬೇಕು. ಗಂಡು ಬೆಟ್ಟಿದ ಚಿತ್ರದುರ್ಗ ವೀರ ಶೌರ್ಯವನ್ನು ದುರ್ಗಾಸ್ತಮಾನ ಕೃತಿಯಲ್ಲಿ ತರಾಸು ದಾಖಲೆ ಮಾಡಿದ್ದಾರೆ. ಆದರೆ, ಎಷ್ಟು ಮನೆಗಳ ಆ ಕೃತಿ ಕಾಣಲು ಸಾಧ್ಯ. ಇಂತಹ ನಿರ್ಲಕ್ಷ್ಯ ಸಂಬಂಧದಿಂದ ಸ್ಥಳೀಯ ವಿಚಾರ ಸಂಪತ್ತುನಿಂದ ದೂರವಾಗುತ್ತೇವೆ ಎಂದು ಹೇಳಿದರು. ಬುದ್ದ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಣ್ಣ ಮಾತನಾಡಿ, ಪ್ರಾದೇಶಿಕವಾದ ಜನಜೀವನದ ಸಾಹಿತ್ಯ ರಚನೆಯಲ್ಲಿ ತಳಕು ಮತ್ತು ಬೆಳೆಗೆರೆ ಮನೆತನಗಳ ಸೇವೆ ಅನನ್ಯವಾಗಿದೆ.

ವಿಶ್ವಮಾನವನಾಗಿ ಹುಟ್ಟುವ ಮಗು, ಅಲ್ಪನಾಗುವ ಪರಿಸ್ಥಿತಿಗೆ ಸಮಾಜದ ವ್ಯವಸ್ಥೆ ಕಾರಣವಾಗುತ್ತಿದೆ. ಕುವೆಂಪು ಬರಹ ಸಮಾನತೆಯ ರೂಪಕವಾಗಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದಾಗಬೇಕು ಎಂದು ತಿಳಿದರು.

Edited By : PublicNext Desk
Kshetra Samachara

Kshetra Samachara

29/12/2024 05:43 pm

Cinque Terre

2.7 K

Cinque Terre

0

ಸಂಬಂಧಿತ ಸುದ್ದಿ