ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಸರ್ಕಾರದಿಂದ ಬರುವ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಿ - ಜಿ.ಎಸ್.ಪಾಟೀಲ

ಗದಗ : ಸಂಘವನ್ನು ಬೆಳಸಲು ಪ್ರತಿಯೊಬ್ಬರು ಪ್ರಾಮಾಣಿಕ ಕಾರ್ಯನಿರ್ವಹಿಸಬೇಕು. ಕುರುಹಿನಶೆಟ್ಟಿ ಸಮಾಜದವರು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸರ್ಕಾರದಿಂದ ಬರುವ ಯೋಜನೆಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ತಾಲೂಕು ನೇಕಾರ ಕುರುಹಿನಶೆಟ್ಟಿ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು.ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ದೇಶದ ಸರ್ವೋತೋಮುಖ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಶ್ರೀಶೈಲ ಸೂರ್ಯಸಿಂಹಾಸನಾಧೀಶ,ಶ್ರೀ ಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು,ಗುಲಗಂಜಿ ಮಠದ ಗುರುಪಾದ ಮಹಾಸ್ವಾಮಿಗಳು,1008 ನೇ ಶ್ರೀ ನಾಲ್ವಡಿ ನೀಲಕಂಠ ಪಟ್ಟದಾರ್ಯ ಮಹಾಸ್ವಾಮಿಗಳು ವಹಿಸಿದ್ದರು.

ಇದೇ ಸಂದರ್ಭದಲ್ಲಿ ಸುಭಾಶಚಂದ್ರ ಸಂಗಳದ,ವಿಧಾನಪರಿಷತ್ ಸದಸ್ಯ ಎಸ್.ಕೇಶವಪ್ರಸಾದ,ಮುರಿಗೆಪ್ಪ ಬನ್ನಿ,ಅಂಬಾದಾಸ ಕಾಮೂರ್ತಿ,ಎಮ್.ಡಿ.ಲಕ್ಷ್ಮೀನಾರಾಯಣ, ಎಮ್.ಮಲ್ಲಿಕಾರ್ಜುನ ನಾಗಪ್ಪ,ಪ್ರಭಾವತಿ ಮಸ್ತಮರಡಿ,ಇದೇ ಸಂದರ್ಭದಲ್ಲಿ ವಿರೇಶ ಸಂಗಳದ,ಗುರುಶಾಂತಪ್ಪ ದಂಡಿನ, ಎಮ್.ಟಿ.ಶಿವಕುಮಾರ, ಬಸವರಾಜ ಬಳಗಾನೂರು, ಪರಪ್ಪ ಹೂವಿನಾಳ,ಮಲ್ಲಿಕಾರ್ಜುನ ಐಲಿ,ಎಮ್.ಬಿ.ರೋಣದ,ಗುರಪ್ಪ ಸೂಡಿ,ಅಶೋಕ‌ ವನ್ನಾಲ,ನೀಲಕಂಠಪ್ಪ ಮೈಲಿ,ಮಂಜುನಾಥ ಹೂವಿನಾಳ ಸೇರಿದಂತೆ ಸಮಾಜದ ಗುರು-ಹಿರಿಯರು ಹಾಗೂ ಯುವಕರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

27/12/2024 04:44 pm

Cinque Terre

21.98 K

Cinque Terre

0