ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಸಿಡಬ್ಲ್ಯೂಸಿ ಸಭೆಯಲ್ಲಿ ಎರಡು ನಿರ್ಣಯಗಳ ಚರ್ಚೆ - ಕೆ.ಸಿ. ವೇಣುಗೋಪಾಲ್

ಬೆಳಗಾವಿ: ಮಹಾತ್ಮಾ ಗಾಂಧೀಜಿ ಬಗ್ಗೆ ಹಾಗೂ ರಾಜಕೀಯದ ಬಗ್ಗೆ ಇಂದಿನ ಸಿಡಬ್ಲ್ಯೂಸಿ ಸಭೆಯಲ್ಲಿ ವಿಸ್ತೃತವಾಗಿ‌ ಚರ್ಚಿಸಲಾಗಿದ್ದು, ಐದು ನಿರ್ಣಯಗಳನ್ನು ಕೈಗೊಂಡಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದ್ದಾರೆ.

ಬೆಳಗಾವಿ ವೀರಸೌಧದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸುಮಾರು 4 ಗಂಟೆಗೂ ಅಧಿಕ ಕಾಲ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆಯಿತು.‌ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಸಿ.ವೇಣುಗೋಪಾಲ್ ಅವರು, ಎರಡು ಪ್ರಸ್ತಾವನೆಗಳ ಮೇಲೆ ಐವತ್ತು ಜನ ನಾಲ್ಕು ಗಂಟೆ ಕಾಲ ಸುದೀರ್ಘವಾಗಿ ಮಾತನಾಡಿದರು. ಕಾಂಗ್ರೆಸ್ ಇತಿಹಾಸದಲ್ಲಿ ಇವತ್ತು ಯಾವಾಗಲೂ ನೆನಪಿನಲ್ಲಿ ಉಳಿಯುವ ಸಭೆ ಆಗಿದೆ. ಇಡೀ ದೇಶದ ಕಾಂಗ್ರೆಸ್ ನಾಯಕರು ಹೆಮ್ಮೆ ಪಡುವ ಸಂದರ್ಭವಿದು. ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷರಾಗಿದ್ದ ಅಧಿವೇಶನಕ್ಕೆ ಶತಮಾನೋತ್ಸವ ಸಂಭ್ರಮವಿದೆ. ಅದೇ ಜಾಗದಲ್ಲಿ ಇವತ್ತು ಸಭೆ ನಡೆಸಲಾಗಿದೆ. ವಿಸ್ತೃತ ಸಿಡಬ್ಲ್ಯೂಸಿ ಸಭೆಯಲ್ಲಿ ಹಲವು ವಿಷಯಗಳ ಬಗ್ಗೆ ಚರ್ಚೆ ಆಗತ್ತದೆ ಎಂದು ಹೇಳಿದ್ದೇವು. ಮಹಾತ್ಮಾ ಗಾಂಧೀಜಿ ಅಂದು ಹೇಳಿದ ವಿಚಾರಗಳ ಬಗ್ಗೆ ಈಗಲೂ ಚರ್ಚೆ ಆಗುತ್ತಿದೆ. ಸಮಾನತೆ, ಭ್ರಾತೃತ್ವದ ಬಗ್ಗೆ ಚರ್ಚೆ ಆಗಿದೆ ಎಂದರು.

Edited By : Nagesh Gaonkar
PublicNext

PublicNext

27/12/2024 10:29 am

Cinque Terre

24.03 K

Cinque Terre

0

ಸಂಬಂಧಿತ ಸುದ್ದಿ