ಬೆಳಗಾವಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರ್ ವಿರುದ್ಧ ಕೊಲೆ ಬೆದರಿಕೆ ಆರೋಪ ಪ್ರಕರಣ ಸಂಬಂಧ, ಗುತ್ತಿಗೆದಾರ ಸಚಿನ್ ಎಂಬುವರು ರೈಲ್ವೇ ಹಳಿಗೆ ಬಿದ್ದು ಬೀದರ್‌ನ ಭಾಲ್ಕಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ಖುದ್ದು ಪ್ರಿಯಾಂಕ್ ಖರ್ಗೆ ಅವರು ಪ್ರತಿಕ್ರಿಯೆ ನೀಡಿದ್ದು, ಆತ್ಮಹತ್ಯೆ ಪ್ರಕರಣದ ಕುರಿತು ನನಗೆ ಹೆಚ್ಚು ಮಾಹಿತಿ ಗೊತ್ತಿಲ್ಲ. ಈಗಷ್ಟೇ ಮಾಧ್ಯಮಗಳ ಮುಖಾಂತರ ತಿಳಿಯಿತು. ಆತ್ಮಹತ್ಯೆ ಪ್ರಕರಣದಲ್ಲಿ ಯಾರ ಹೆಸರು ಕೇಳಿ ಬರುತ್ತಿದೆಯೋ ಅವರು ನಮ್ಮ ಕಾರ್ಪೋರೇಟರ್ ಆಗಿದ್ದು ನಿಜ ಎಂದು ರಾಜು ಕಪನೂರ್ ಬಗ್ಗೆ ಸಚಿವರ ಸ್ಪಷ್ಟಪಡಿಸಿದ್ದಾರೆ.
ಅಲ್ಲದೇ ಯಾರು ಏನು ಹೇಳಿದ್ದಾರೆ, ಯಾಕೆ ಆರೋಪ ಮಾಡುತ್ತಿದ್ದಾರೆ? ಘಟನೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಏನೇ ಇದ್ದರೂ ತನಿಖೆ ಮಾಡಿಸೋಣ. ನಾನೇ ಖುದ್ದು ನಿಂತು ತನಿಖೆಗೆ ಆಗ್ರಹಿಸುತ್ತೇನೆ ಎಂದರು.
PublicNext
26/12/2024 08:49 pm