ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: ಹಂದಿಗಳಿಂದ ರಕ್ಷಣೆಗೆಂದು ಇಟ್ಟಿದ್ದ ಗೊಬ್ಬರ ತಿಂದು 12 ಆಡುಗಳು ಸಾವು

ಬೀದರ್: ಹಂದಿಗಳಿಂದ ರಕ್ಷಣೆಗೆಂದು ಇಟ್ಟಿದ್ದ ಗೊಬ್ಬರ ತಿಂದು 12 ಆಡುಗಳು ಸಾವನ್ನಪ್ಪಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲೆಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.

ಹಂದಿಗಳ ಕಾಟಕ್ಕೆ ಬೇಸತ್ತು ತೊಗರಿ ಬೆಳೆ ನಡುವೆ ಯೂರಿಯಾ ಗೊಬ್ಬರವನ್ನು ರೈತರು ಇಟ್ಟಿದ್ದರು. ಈ ಸಂದರ್ಭ ಹೊಲದಲ್ಲಿ ಕುರಿಗಾಯಿ ಆಡುಗಳನ್ನು ಮೇಯಲು ಬಿಟ್ಟಿದ್ದ. ಹೊಲದಲ್ಲಿದ್ದ ಯೂರಿಯಾ ಗೊಬ್ಬರ ತಿಂದು 12 ಆಡುಗಳು ಅಸ್ವಸ್ಥವಾಗಿದ್ದವು. ಕೂಡಲೇ ಸ್ಥಳೀಯ ಪಶು ವೈದ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ಕೊಟ್ಟರು ಪಶು ವೈದ್ಯಾಧಿಕಾರಿ ಬರುವಷ್ಟರಲ್ಲೆ 12 ಆಡುಗಳು ಸಾವನ್ನಪ್ಪಿವೆ.

ಭಾರೀ ನಷ್ಟದಿಂದ ಕುರಿಗಳ ಮಾಲೀಕ ಗಣಪತ್ ರಾವ್ ಕಂಗಾಲಾಗಿದ್ದಾರೆ. ಸ್ಥಳಕ್ಕೆ ಕುರಿ ಮತ್ತು ಉಣ್ಣೆ ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾದ ಬಾಲಾಜಿ ಜಬಾಡೆ ಭೇಟಿ ನೀಡಿದ್ದು ಮಾಲೀಕರಿಗೆ ಪರಿಹಾರದ ಭರವಸೆ ನೀಡಿದ್ದಾರೆ.

Edited By : Shivu K
PublicNext

PublicNext

26/12/2024 08:01 pm

Cinque Terre

13.58 K

Cinque Terre

0

ಸಂಬಂಧಿತ ಸುದ್ದಿ