ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್: ಖದೀಮರ ಗ್ಯಾಂಗ್ ಎಂಟ್ರಿ - ಬೆಚ್ಚಿಬಿದ್ದ ಬಸವಕಲ್ಯಾಣ ಜನರು

ಬೀದರ್: ಒಂದೇ ರಾತ್ರಿ ಒಂಬತ್ತು ಮನೆಗೆ ಕನ್ನ, ಗ್ರಾಮಗಳಿಗೆ ನುಗ್ಗಿರೋ ದರೋಡೆ ಗ್ಯಾಂಗ್ ಕಂಡು ಇಡೀ ಗ್ರಾಮಸ್ಥರೇ ಶಾಕ್ ಆದ ಘಟನೆ ನಡೆದಿದೆ.

ಕಳ್ಳತನಕ್ಕೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ. ಒಂದೇ ರಾತ್ರಿ ಉಮ್ಮಾಪೂರ, ಕೊಂಗೇವಾಡಿ, ಚಂಡಕಾಪುರ ಗ್ರಾಮದಲ್ಲಿ 9 ಮನೆಗಳನ್ನ ದೋಚಿದ್ದಾರೆ. ಎರಡು ಬೈಕ್‌ಗಳಲ್ಲಿ ಗ್ರಾಮಕ್ಕೆ ನುಗ್ಗಿದ 6 ಜನರ ಗ್ಯಾಂಗ್ ಬರೋಬ್ಬರಿ 9 ಮನೆಗಳನ್ನ ದೋಚಿ ಮೂರು ಮನೆಗಳಲ್ಲಿದ್ದ 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನ ದೋಚಿದ್ದಾರೆ. ಇನ್ನು ದರೋಡೆ ಗ್ಯಾಂಗ್ ಗ್ರಾಮಕ್ಕೆ ನುಗ್ಗಿದ್ದಕ್ಕೆ ಬೆಚ್ಚಿಬಿದ್ದಿರೋ ಗ್ರಾಮಸ್ಥರು ಗ್ರಾಮದಲ್ಲಿ ಡಂಗೂರ ಸಾರಿ, ಎಚ್ಚರಿಕೆ ಸಂದೇಶ ಸಾರುತ್ತಿದ್ದಾರೆ.

ಈ ಸಂಬಂಧ ಪತ್ರಿಕೆಗಳೊಡನೆ ಮಾತನಾಡಿದ ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಮನೆಗೆ ಬೀಗ ಹಾಕಿ ದಿನ, ವಾರ, ತಿಂಗಳಗಟ್ಟಲೇ ಮನೆ ಬಿಟ್ಟು ಹೋಗುವವರು ಪೊಲೀಸರಿಗೆ ಮಾಹಿತಿ ನೀಡಿ ಅಂತಾ ಪೊಲೀಸ್ ಇಲಾಖೆ ಜಾಗೃತಿ ಮೂಡಿಸಿದ್ರೂ ಜನ ಹೇಳುತ್ತಿಲ್ಲ ಎಂದರು.

Edited By : Vinayak Patil
PublicNext

PublicNext

22/12/2024 07:52 am

Cinque Terre

30.04 K

Cinque Terre

0

ಸಂಬಂಧಿತ ಸುದ್ದಿ