ಬೀದರ್ : ಔರಾದ್ ತಾಲೂಕಿನ ಭೂ ದಾಖಲೆ ಸಹಾಯಕ ನಿರ್ದೇಶಕ ಸಂತೋಷ್ ಬೊಗಾರ್ ಅವರು ಲಂಚ ಸ್ವೀಕರಿಸುವ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ನಡೆದಿದೆ .
ವಡಗಾಂವ್ (ಡಿ) ಗ್ರಾಮದ ನಿವಾಸಿಯಾದ ಮುಹಮ್ಮದ್ ಶೌಕತ್ ಅಲಿ ಅವರು ತಮ್ಮ ಹೆಸರಿನಲ್ಲಿದ್ದ ಒಟ್ಟು 20 ಗುಂಟೆ ಜಮೀನಿನಲ್ಲಿ ಈಗಾಗಲೇ 10 ಗುಂಟೆ ಜಮೀನಿನ ಸರ್ವೇ ಮಾಡಲಾಗಿದ್ದು, ಬಾಕಿ ಉಳಿದ 10 ಗುಂಟೆ ಜಮೀನಿನ ಸರ್ವೇ ಕುರಿತು ತಾಲೂಕಿನ ಎ.ಡಿ.ಎಲ್.ಆರ್ ಕಛೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಜಮೀನಿನ ಸರ್ವೆ ಮಾಡುವ ಕುರಿತು ತಾಲೂಕು ಭೂದಾಖಲೆಗಳ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭೂಮಾಪಕ ಸಂತೋಷ್ ಬೊಗಾರ್ ಅವರಿಗೆ ಭೇಟಿಯಾಗಿ ಸರ್ವೇ ಮಾಡಲು ವಿನಂತಿಸಲಾಗಿತ್ತು. ಅವರು ಸರ್ವೇ ಮಾಡಲು 1 ಲಕ್ಷ 80 ಸಾವಿರ ರೂ. ಲಂಚದ ರೂಪದಲ್ಲಿ ಬೇಡಿಕೆ ಇಟ್ಟಿದ್ದರು. ಕೊನೆಗೆ 1 ಲಕ್ಷ 50 ಸಾವಿರಕ್ಕೆ ಒಪ್ಪಿದ್ದರು ಎಂದು ತಿಳಿದು ಬಂದಿದೆ.
PublicNext
20/12/2024 02:35 pm