ಬೀದರ್: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ ಹಿನ್ನಲೆ ಗುತ್ತಿಗೆದಾರ ಸೂಸೈಡ್ ಮಾಡಿಕೊಂಡಿರುವ ಘಟನೆ ಬೀದರ್ ಅಲ್ಲಿ ನಡೆದಿದೆ. ಬೀದರ್‌ನಲ್ಲಿ ಗುತ್ತಿಗೆದಾರ ರೈಲ್ವೇ ಟ್ರ್ಯಾಕ್ ಗೆ ಬಿದ್ದು ಸೂಸೈಡ್ ಮಾಡಿಕೊಂಡಿದ್ದು ಸಚಿನ್ (26 ವರ್ಷ) ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಅಂತ ತಿಳಿದು ಬಂದಿದೆ.
ಏಳು ಪುಟಗಳ ಸಮಗ್ರವಾದ ಲೆಟರ್ ಬರೆದು ಆತ್ಮಹತ್ಯೆಗೆ ಶರಣಾಗಿರುವ ಮಾಹಿತಿ ಇದೆ..ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು ಮೇಲೆ ಗಂಭೀರ ಆರೋಪ ಬಂದಿದ್ದು , ಟೆಂಡರ್ ಕೊಡುವ ವಿಚಾರಕ್ಕೆ ಗುತ್ತಿಗೆದಾರನಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ಮತ್ತೆ ರಾಜು ಕಪಣೂರ್ ನಿಂದ 1 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ.. 1 ಕೋಟಿ ರೂಪಾಯಿ ನೀಡದಿದ್ರೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆ ಸಚಿನ್ ಸೂಸೈಡ್ ಮಾಡಿಕೊಂಡ ಮಾಹಿತಿ ಇದೆ. ಈ ಕುರಿತು ಬೀದರ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
26/12/2024 05:36 pm