ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : ಯೂರಿಯಾ ಗೊಬ್ಬರ ತಿಂದು 12 ಮೇಕೆಗಳು ಮೃತ್ಯು

ಬೀದರ್ : ಯೂರಿಯಾ ಗೊಬ್ಬರ ತಿಂದು ಕುರಿಗಾಹಿ ಗಣಪತಿ ರಾವ್ ತಂದೆ ನರ್ಸಿಂಗ ರಾವ್ ಅವರಿಗೆ ಸೇರಿದ 12 ಮೇಕೆಗಳು ಸಾವನ್ನಪ್ಪಿದ ದಾರುಣ ಘಟನೆ ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ಗ್ರಾಮದಲ್ಲಿ ನಡೆದಿದೆ.

ಮಂಗಳವಾರ ಮುಂಜಾನೆ ಎಂದಿನಂತೆ ಮೇಕೆಗಳನ್ನು ಮೇಯಿಸಲು ಮನೆಯಿಂದ ಹೊಲಕ್ಕೆ ಕರೆದುಕೊಂಡು ಹೋಗಲಾಗಿತ್ತು. ಖಾಲಿಯಿದ್ದ ತೊಗರಿ ಹೊಲದಲ್ಲಿ ಮೇಯಿಸುತ್ತಿದ್ದಾಗ ಕಾಡು ಹಂದಿಗಳ ಕಾಟ ತಪ್ಪಿಸಲು ಹೊಲದಲ್ಲಿ ಇಟ್ಟಿದ್ದ ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿವೆ ಎಂದು ತಿಳಿದು ಬಂದಿದೆ.

ಯೂರಿಯಾ ಗೊಬ್ಬರ ತಿಂದು ಮೇಕೆಗಳು ಅಸ್ವಸ್ಥವಾಗಿ ನೆಲಕ್ಕೆ ಬಿದ್ದದ್ದು ನೋಡಿದ ಗಣಪತಿ ರಾವ್ ತಕ್ಷಣವೇ ಧನ್ನುರ್ ಪಶುವೈದ್ಯರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅಲ್ಲಿನ ಪಶುವೈದ್ಯ ಕುರಿ ನಿಗಮದ ಅಧಿಕಾರಿಗಳಿಗೆ ಘಟನೆ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬರುವಷ್ಟರಲ್ಲಿ 12 ಮೇಕೆಗಳು ಸಾವನ್ನಪ್ಪಿದ್ದವು. ಇನ್ನು ಕೆಲವು ಮೇಕೆಗಳ ಜೀವ ಉಳಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಅಧಿಕಾರಿಗಳು ಬಂದು 12 ಮೃತ ಮೇಕೆಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಸರಕಾರದಿಂದ ಬರುವ ಅನುಗ್ರಹ ಯೋಜನೆ ಅಡಿಯಲ್ಲಿ ಸಾವನ್ನಪ್ಪಿದ ಪ್ರತಿ ಮೇಕೆಗಳಿಗೆ 5 ಸಾವಿರ ರೂ. ತಕ್ಷಣವೇ ಮಂಜೂರು ಮಾಡಲಾಗುತ್ತದೆ ಎಂದು ಭರವಸೆ ನೀಡಿ, ಕುರಿಗಾಹಿ ಗಣಪತಿ ಅವರಿಗೆ ಧೈರ್ಯ ತುಂಬಿದರು.

Edited By : Manjunath H D
PublicNext

PublicNext

26/12/2024 10:24 am

Cinque Terre

22.75 K

Cinque Terre

0

ಸಂಬಂಧಿತ ಸುದ್ದಿ