ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ : ಆಕಸ್ಮಿಕ ಬೆಂಕಿ ತಗುಲಿ 6 ಎಕರೆ ಕಬ್ಬು ನಾಶ

ಬೀದರ್ : ಆಕಸ್ಮಿಕ ಬೆಂಕಿ ತಗುಲಿ 6 ಎಕರೆ ಕಬ್ಬು ನಾಶವಾದ ಘಟನೆ ಔರಾದ್ ತಾಲ್ಲೂಕಿನ ಕಂದಗೋಳ ಗ್ರಾಮದಲ್ಲಿ ನಡೆದಿದೆ.

ಇಂದು 6 ಎಕರೆ ಕಬ್ಬಿನ ಗದ್ದೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ರೈತರಾದ ಬಾಬುರಾವ್ ಚಿಮಕೋಡೆ ಮತ್ತು ವಿಶ್ವನಾಥ್ ಪಾಟೀಲ್ ಅವರ ಮಾಲೀಕತ್ವದ ತಲಾ 3 ಎಕರೆ ಸೇರಿ ಒಟ್ಟು 6 ಎಕರೆ ಕಬ್ಬು ಸುಟ್ಟು ಕರಕಲಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಸಾವಿರಾರು ರೂ. ಖರ್ಚು ಮಾಡಿ, ಹಗಲು ರಾತ್ರಿ ಎನ್ನದೆ ದುಡಿದು ಉತ್ತಮ ರೀತಿಯಾಗಿ ಕಬ್ಬಿನ ಬೆಳೆ ಬೆಳೆದಿದ್ದೆವು. ಆದರೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಹಾನಿಯಾದ ನಮ್ಮ ಕಬ್ಬಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಸ್ಥಳೀಯರು ಬೆಂಕಿ ನಂದಿಸಲು ಹರಸಹಾಸ ಪಟ್ಟರು. ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಗದ್ದೆಗೆ ಬಿದ್ದ ಬೆಂಕಿ ನಂದಿಸಿದರು. ಆದರೂ ಲಕ್ಷಾಂತರ ರೂ. ಮೌಲ್ಯದ ಬೆಳೆ ನಷ್ಟವಾಗಿದೆ ಎಂದು ರೈತರು ತಿಳಿಸಿದ್ದಾರೆ.

Edited By : Abhishek Kamoji
Kshetra Samachara

Kshetra Samachara

25/12/2024 10:05 pm

Cinque Terre

960

Cinque Terre

0