ಬೀದರ್: ಕರ್ನಾಟಕ ರಾಜ್ಯಾದ್ಯಂತ ಖಾಸಗಿ ಕಾಲೇಜುಗಳಲ್ಲಿ ಓದುತ್ತಿರುವ ವೃತ್ತಿಪರ ಕೋರ್ಸ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಗೆ ಓದುವುದಕ್ಕಾಗಿ ಸರ್ಕಾರದಿಂದ ಈ ಮೂರು ವರ್ಷಗಳ ಹಿಂದೆ ಕಾಲೇಜು ಶುಲ್ಕ ಮಂಜೂರಾಗುತ್ತಿತ್ತು. ಅಲ್ಲದೇ ಪಿಯು, ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ವೃತ್ತಿಪರ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲು ಕುಟುಂಬದ ವಾರ್ಷಿಕ ಆದಾಯ ಮಿತಿ 6 ಲಕ್ಷ ರೂಪಾಯಿ ಮೀರಿರಬಾರದು ಎಂಬ ಷರತ್ತು ವಿಧಿಸಿದೆ. 2023-24ನೇ ಸಾಲಿನಿಂದ ಜಾರಿಗೆ ಬರುವಂತೆ ಸಮಾಜ ಕಲ್ಯಾಣ ಇಲಾಖೆ ಆದೇಶ ಹೊರಡಿಸಿದೆ.
ಇಲ್ಲಿಯವರೆಗೂ ಈ ನಿಯಮ ಜಾರಿಯಲ್ಲಿ ಇರಲಿಲ್ಲ. ಆದೇಶದಲ್ಲಿ ನೇರವಾಗಿ ಮ್ಯಾನೇಜ್ಮೆಂಟ್ ಕೂಟಗಳಲ್ಲಿ ವೃತ್ತಿಪರ ಕೋರ್ಸ್ ಆಯ್ಕೆಯಾಗಿರುವ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕ ಪಾವತಿಸಬಾರದು ಎಂದು ದಿನಾಂಕ: 29-08-2020 ರಂದು ಉಲ್ಲೇಖ 2ರಂತೆ ರಾಜ್ಯ ಸರ್ಕಾರದಿಂದ ಹೋರಡಿಸಿರುವ ಸುತ್ತೋಲೆ ಉದಾಹರಣೆಯಾಗಿದೆ, ಈ ಆದೇಶ ಎಷ್ಟರ ಮಟ್ಟಿಗೆ ಸರಿ ಎಂಬುವುದು ನಮ್ಮಪ್ರಶ್ನೆ?
ಅದು ಅಲ್ಲದೆ ಕೇವಲ ಸರರ್ಕಾರಿ ಕೂಟಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮಾತ್ರ ಓದುವುದಕ್ಕಾಗಿ ಹಕ್ಕಿದೆಯೇ ಮ್ಯಾನೇಜ್ಮೆಂಟ್ ಫೋಟೋಗಳಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಓದುವುದಕ್ಕೆ ಹಕ್ಕಿಲ್ಲ ಎಂಬುದು ಎತ್ತಿ ಕಾಣುತ್ತಿದೆ ಭಾರತ ಸಂವಿಧಾನದ ಮೂಲಭೂತ ಹಕ್ಕು ಶಿಕ್ಷಣ, ಈ ಶಿಕ್ಷಣದ ಹಕ್ಕು ಭಾರತಯ ಪ್ರತಿಯೋಬ ಪ್ರಜೆ ಹಕ್ಕಾಗಿದೆ ಆದರೆ ಇಲ್ಲಿ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬತ್ತೆ ಆದೇಶ ಹೊರಡಿಸಿದೆ ಈ ಆದೇಶಕ್ಕೆ ಸಂಪೂರ್ಣವಾಗಿ ಖಂಡಿಸುತ್ತೆವೆ ಒಂದು ವೇಳೆ ಈ ಆದೇಶ ರದ್ದು ಪಡಿಸದೆ ಇದ್ದರೆ ಕರ್ನಾಟಕ ಯುವ ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ತಿಳಿಸಿ ಜಿಲ್ಲಾಧಿಕಾರಿಗಳ ಬೀದರ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಗುರುದಾಸ ಅಮದಲಪಾಡ, ಧನರಾಜ್ ಕೋಳಾರ ಕೆ, ಗಜಸೂರ್ಯ ಮನ್ನಾಖೇಳಿ ದಲಿತ ಮುಖಂಡರಾದ ಬಸವರಾಜ ಇನ್ನಿತರ ಉಪಸ್ಥಿತರಿದ್ದರು.
PublicNext
18/12/2024 05:05 pm