ಕಝಾಕಿಸ್ತಾನ್: ಅಜರ್‌ಬೈಜಾನ್ ಏರ್‌ಲೈನ್ಸ್ ಪತನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 38ಕ್ಕೆ ಏರಿಕೆಯಾಗಿದ್ದು, ಇನ್ನೂ ಅನೇಕರು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದಾರೆ. ಈ ನಡುವೆ ವಿಮಾನ ದುರಂತದ ಕೊನೆಯ ಕ್ಷಣಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಯಾಣಿಕನೋರ್ವ ಸೆರೆಹಿಡಿದಿರುವ ವಿಡಿಯೋದಲ್ಲಿ, ಪ್ರಯಾಣಿಕರು ದೇವರನ್ನು ನೆನೆದು ಪ್ರಾರ್ಥಿಸುವ ಆಡಿಯೋ ಕೇಳುತ್ತಿದೆ. ಜೊತೆಗೆ ಪ್ರಯಾಣಿಕರ ಬಳಿ ಆಕ್ಸಿಜನ್ ಮಾಸ್ಕ್ ಇರುವುದನ್ನು ನೋಡಬಹುದಾಗಿದೆ. ಕೊನೆಯದಾಗಿ ವಿಮಾನ ಬೆಂಕಿ ಹೊತ್ತಿಕೊಂಡು ಬಯಲು ಪ್ರದೇಶದಲ್ಲಿ ಪತನವಾಗುತ್ತದೆ. ಇದಾದ ಬಳಿಕ ಕೆಲ ಪ್ರಯಾಣಿಕರು ಗಾಯಗೊಂಡು ಚೆಲ್ಲಾಪಿಲ್ಲಿಯಾಗಿ ಕ್ಯಾಬಿನ್ ಒಳಗೆ ಬಿದ್ದಿರುವ ದೃಶ್ಯ ವಿಡಿಯೋದಲ್ಲಿದೆ.
ವಿಮಾನ ನೇರವಾಗಿ ನೆಲಕ್ಕೆ ಅಪ್ಪಳಿಸಿದೆ. ಕೆಲವರ ಕೂಗೂಟ ಕೇಳಿಸುತ್ತಿದೆ. ಮತ್ತೆ ಕೆಲವರ ಪ್ರಾಣ ಪಕ್ಷಿ ನೋಡು ನೋಡುತ್ತಿದ್ದಂತೆ ಹಾರಿ ಹೋಗಿದೆ. ಆದರೆ ಪತನದ ಬಳಿಕವೂ ವಿಡಿಯೋ ರೆಕಾರ್ಡ್ ಆಗಿದೆ. ವಿಮಾನ ನೆಲಕ್ಕೆ ಅಪ್ಪಳಿಸಿ ಪತನದ ಕೆಲ ಹೊತ್ತಿನ ಬಳಿಕ ವಿಡಿಯೋ ರೆಕಾರ್ಡ್ ಮಾಡಿದ ಪ್ರಯಾಣಿಕ ತನ್ನ ಆಪ್ತರು ಹೇಗಿದ್ದಾರೆ ಅನ್ನೋದು ಪ್ರಶ್ನಿಸುತ್ತಿರುವ ದೃಶ್ಯ ಕೂಡ ರೆಕಾರ್ಡ್ ಆಗಿದೆ. ಈ ಎರಡು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಕಜಕಿಸ್ತಾನದಲ್ಲಿ ನಡೆದ ಅಜರ್‌ಬೈಜಾನ್ ಏರ್‌ಲೈನ್ಸ್ ದುರಂತದ ದೃಶ್ಯ ಎನ್ನಲಾಗಿದೆ.
PublicNext
26/12/2024 07:04 pm