ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'NEET'​ ಶಿಕ್ಷಕ ಸಾಹಿಲ್ ಸಿದ್ದಿಕಿ ರಾಸಲೀಲೆ ವಿಡಿಯೋ ಲೀಕ್ : ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಅರೆಸ್ಟ್‌!

ಉತ್ತರ ಪ್ರದೇಶ : ಆಗಾಗ್ಗೆ ಪೆನ್​ಡ್ರೈವ್​, ಸಿಡಿ ಇಂಥ ಶಬ್ದಗಳು ಕಿವಿಗೆ ಬೀಳುತ್ತಲೇ ಇರುತ್ತವೆ. ಇದೀಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ. ನೀಟ್​ ಪರೀಕ್ಷೆಗೆ ರೆಡಿಯಾಗ್ತಿರೋ ವಿದ್ಯಾರ್ಥಿನಿಯ ಜೊತೆಗೆ ಜೀವಶಾಸ್ತ್ರವನ್ನು ಬೋಧಿಸುತ್ತಿದ್ದ ಸಾಹಿಲ್ ಸಿದ್ದಿಕಿ ಎಂಬ ಶಿಕ್ಷಕನ ಕರಾಮತ್ತು ಬಯಲಾಗಿದೆ.

ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯಾವಳಿ ಸೆರೆಯಾಗಿದೆ. ಬಾತ್​ರೂಮ್​ನಲ್ಲಿ ವಿದ್ಯಾರ್ಥಿನಿಯ ಜೊತೆ ಮಾಡಬಾರದ್ದು ಮಾಡುತ್ತಾ ಸಿಕ್ಕಿಬಿದ್ದಿರುವ ದೃಶ್ಯ ಇದರಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳನ್ನು ಪೆನ್​ಡ್ರೈವ್​ನಲ್ಲಿ ಪೊಲೀಸರಿಗೆ ಯಾರೋ ಕಳಿಸಿರುವ ಹಿನ್ನೆಲೆಯಲ್ಲಿ ಶಿಕ್ಷಕ ಸದ್ಯ ಅರೆಸ್ಟ್​ ಆಗಿದ್ದಾನೆ.

ಉತ್ತರ ಪ್ರದೇಶದ ಕಾನ್ಪುರದ ಕಾಕಡಿಯೊದಲ್ಲಿ ಐ ಆ್ಯಂಡ್​ ಐ ಕೋಚಿಂಗ್‌ನಲ್ಲಿ ಜೀವಶಾಸ್ತ್ರವನ್ನು ಬೋಧಿಸುತ್ತಿರುವ ಸಾಹಿಲ್ ಸಿದ್ದಿಕಿ ಎಂಬ ಶಿಕ್ಷಕನನ್ನು ಭಾನುವಾರ ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ನೀಟ್​ ಆಕಾಂಕ್ಷಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇವರನ್ನು ಬಂಧಿಸಲಾಗಿದೆ. ಕೋಚಿಂಗ್ ಸೆಂಟರ್‌ನ ನಿರ್ದೇಶಕ ಆಶಿಶ್ ಶ್ರೀವಾಸ್ತವ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

2 ದಿನಗಳ ಹಿಂದೆ, ಕೋಚಿಂಗ್ ಸೆಂಟರ್‌ನಲ್ಲಿ ಸಾಹಿಲ್ ಅವರ ಹೆಸರಿದ್ದ ಒಂದು ಲಕೋಟೆ ಬಂದಿತ್ತು. ಆ ಮುಚ್ಚಿದ ಲಕೋಟೆಯನ್ನು ಆಶಿಶ್​ ಶ್ರೀವಾಸ್ತವ ಅವರ ಕೈಸೇರಿತು. ಒಳಗೆ ಪೆನ್ ಡ್ರೈವ್ ಇದ್ದು, ಲ್ಯಾಪ್‌ಟಾಪ್‌ಗೆ ಕನೆಕ್ಟ್​ ಮಾಡಿದಾಗ , ಕೋಚಿಂಗ್ ಆವರಣದಲ್ಲಿ ಸಾಹಿಲ್ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ ತೋರಿದ ಸಿಸಿಟಿವಿ ದೃಶ್ಯಾವಳಿ ಬಹಿರಂಗಪಡಿಸಿತು. ಸುಮಾರು ಹತ್ತು ನಿಮಿಷಗಳ ಕಾಲ ಬಾತ್​ರೂಮ್​ನಲ್ಲಿ ವಿದ್ಯಾರ್ಥಿನಿಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವುದು ಅದರಲ್ಲಿ ದಾಖಲಾಗಿದೆ. ಇದರ ವಿಡಿಯೋ ಈಗ ವೈರಲ್​ ಆಗಿದೆ.

ಈ ವಿಡಿಯೋದ ಬಗ್ಗೆ ವಿಭಿನ್ನ ರೀತಿಯ ಚರ್ಚೆಗಳು ಶುರುವಾಗಿದೆ. ಇದರಲ್ಲಿ ವಿದ್ಯಾರ್ಥಿನಿ ಶಿಕ್ಷಕನ ಜೊತೆ ಸಲೀಸಾಗಿ ಇರುವುದನ್ನು ನೋಡಿರುವ ಹಲವರು, ಇದರಲ್ಲಿ ವಿದ್ಯಾರ್ಥಿನಿಯ ತಪ್ಪು ಕೂಡ ಇದೆ ಎಂದಿದ್ದಾರೆ.

Edited By : Abhishek Kamoji
PublicNext

PublicNext

26/12/2024 03:09 pm

Cinque Terre

94.73 K

Cinque Terre

3

ಸಂಬಂಧಿತ ಸುದ್ದಿ