ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

VIDEO: ತಿರುಪತಿಯಲ್ಲಿ ಮತ್ತೊಂಡು ಅವಘಡ - ಪ್ರಸಾದ ಕೌಂಟರ್‌ನಲ್ಲಿ ಬೆಂಕಿ!

ತಿರುಪತಿ: ಕೆಲದಿನಗಳ ಹಿಂದಷ್ಟೇ ತಿರುಪತಿ ತಿರುಮಲ ದೇವಸ್ಥಾನದಲ್ಲಿ ಕಾಲ್ತುಳಿತದ ಘಟನೆ ನಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಪ್ರಸಾದ ಕೌಂಟರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ಪ್ರಸಾದ ಸ್ಥಳದ 47ನೇ ಕೌಂಟರ್‌ನಲ್ಲಿ ಈ ಘಟನೆ ನಡೆದಿದೆ. ಇದ್ದಕ್ಕಿದಂತೆ ಬೆಂಕಿ ಹೊತ್ತಿಕೊಂಡಿದೆ. ಕಂಪ್ಯೂಟರ್‌ಗೆ ಬಳಸುತ್ತಿದ್ದ ಯುಪಿಎಸ್‌ಗೆ ಬೆಂಕಿ ತಗುಲಿದ ಕಾರಣ ಈ ಅಗ್ನಿ ಅವಘಡ ನಡೆದಿದೆ TTD ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಅವರು ಸ್ಪಷ್ಟಪಡಿಸಿದ್ದಾರೆ. ಕಾಲ್ತುಳಿತ ಘಟನೆ ನಡೆದ ನಾಲ್ಕು ದಿನಗಳ ನಂತರವಷ್ಟೇ ಅಗ್ನಿ ದುರಂತ ನಡೆದಿರುವುದು ಭಕ್ತರಲ್ಲಿ ಆತಂಕ ಮೂಡಿಸಿದೆ.

Edited By : Nagaraj Tulugeri
PublicNext

PublicNext

13/01/2025 10:53 pm

Cinque Terre

73.21 K

Cinque Terre

1

ಸಂಬಂಧಿತ ಸುದ್ದಿ