ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಪೋಕ್ಲು: ಕೈಕಾಡು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ- ಸುಟ್ಟು ಭಸ್ಮವಾದ ಭತ್ತ, ಹುಲ್ಲು

ನಾಪೋಕ್ಲು: ಆಕಸ್ಮಿಕವಾಗಿ ಬೆಂಕಿ ತಗುಲಿ ಭತ್ತ ಹಾಗೂ ಹುಲ್ಲು ಸುಟ್ಟು ಭಸ್ಮವಾದ ಘಟನೆ ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಕೈಕಾಡು ಗ್ರಾಮದಲ್ಲಿ ನಡೆದಿದೆ.

ಯಂತ್ರದ ಸಹಾಯದಿಂದ ಗ್ರಾಮದ ನಿವೃತ್ತ ಮಾಜಿ ಸೈನಿಕ ಕುಲ್ಲಚೆಟ್ಟಿ ನಾಣಯ್ಯ (ತಮ್ಮಣಿ) ಎಂಬವರ ಮನೆಯಂಗಳದಲ್ಲಿ ಕಾರ್ಮಿಕರು ಭತ್ತ ಒಕ್ಕಲು ಮಾಡುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಭತ್ತ ಮತ್ತು ಹುಲ್ಲು ನಾಶವಾಗಿದೆ. ಜೊತೆಗೆ ಶೆಡ್‌ನಲ್ಲಿದ್ದ ಕಾರು ಕೂಡ ಬೆಂಕಿಯಿಂದ ಹಾನಿಗೊಳಗಾಗಿದೆ. ತಕ್ಷಣ ಮಾಹಿತಿ ತಿಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Edited By : Somashekar
PublicNext

PublicNext

13/01/2025 05:01 pm

Cinque Terre

49.58 K

Cinque Terre

0