ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಗೋವನಕೊಪ್ಪದಲ್ಲಿ ಮಾದರಿ ಕುಣಿ ನಿರ್ಮಾಣ

ಧಾರವಾಡ: ಸಾಮಾನ್ಯವಾಗಿ ಯಾರಾದರೂ ಹಿರಿಯರು ಹಾಗೂ ನಾಯಕರು ತೀರಿಕೊಂಡಾಗ ಅವರ ಅಂತ್ಯ ಸಂಸ್ಕಾರದ ಬಳಿಕ ಸಮಾಧಿ ಅಥವಾ ಸ್ಮಾರಕ ಮಾಡಲಾಗುತ್ತದೆ. ಆದರೆ ಧಾರವಾಡದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತ್ಯಸಂಸ್ಕಾರದ ಕುಣಿಯನ್ನೇ ದೇವಸ್ಥಾನ ಮಾದರಿಯಲ್ಲಿ ನಿರ್ಮಿಸಿರುವ ಅಪರೂಪದ ಪ್ರಸಂಗ ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ.

ಗೋವನಕೊಪ್ಪದ ಬಸವಣ್ಣೆಪ್ಪ ಗಂಗಪ್ಪ ಹೊರಟ್ಟಿ ಎಂಬ 84 ವರ್ಷದ ಹಿರಿಯರು ನಿಧನರಾಗಿದ್ದು, ಇವರು ಪ್ರಗತಿಪರ ರೈತರಾಗಿದ್ದರು.

ಇವರ ಅಂತ್ಯಸಂಸ್ಕಾರದ ಕುಣಿಯನ್ನೇ ವಿಶೇಷವಾದ ದೇವಸ್ಥಾನ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಅವರದ್ದೇ ಜಮೀನಿನಲ್ಲಿ ಐದಾರು ಗುಂಟೆ ಜಾಗದಲ್ಲಿ ವಿಶಾಲವಾದ ಕುಣಿಯನ್ನು ನಿರ್ಮಿಸಲಾಗಿದೆ. ತೀರ್ಥಕುಂಡ ಭಾವಿಯಂತೆ ಮೆಟ್ಟಿಲುಗಳನ್ನು ಮಾಡಿ. ಮಧ್ಯದಲ್ಲಿ ದೇವಸ್ಥಾನ ಮಾಡಲಾಗಿದ್ದು, ಆ ದೇವಸ್ಥಾನದಲ್ಲಿಯೇ ಪಾರ್ಥಿವ ಶರೀರ ಇಡಲು ಕಮಾನು ಮಾಡಲಾಗಿದೆ. ಮೇಲ್ಗಡೆ ಈಶ್ವರ ಲಿಂಗವನ್ನೂ ಮಣ್ಣಿನಲ್ಲೇ ಮಾಡಿದ್ದಾರೆ. ಯಾವುದೇ ನಿರ್ಮಾಣ ಸಾಮಗ್ರಿ ಬಳಸದೇ ಕೇವಲ‌ ನೆಲವನ್ನೇ ಅಗೆಯುತ್ತ ಈ ದೇವಸ್ಥಾನ ಮಾದರಿಯ ಕುಣಿ ಮಾಡಲಾಗಿದೆ.‌

Edited By : Shivu K
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

26/12/2024 04:36 pm

Cinque Terre

45.94 K

Cinque Terre

0

ಸಂಬಂಧಿತ ಸುದ್ದಿ