ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅತಿಕಾರಿಬೆಟ್ಟು ಗ್ರಾಮದ ಪಂಜಿನಡ್ಕ ಪರಿಸರದ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದ ವ್ಯಕ್ತಿಗೆ ದಂಡ

ಮುಲ್ಕಿ ತಾಲ್ಲೂಕಿನ ಅತಿಕಾರಿಬೆಟ್ಟು ಗ್ರಾಮ ಪಂಚಾಯತಿ ವ್ಯಾಪ್ತಿಯ ಅತಿಕಾರಿಬೆಟ್ಟು ಗ್ರಾಮದ ಪಂಜಿನಡ್ಕ ಪರಿಸರದ ರಸ್ತೆ ಬದಿಯಲ್ಲಿ, ವ್ಯಕ್ತಿಯೊರ್ವರು ಎಸೆದಿದ್ದ ಕಸವನ್ನು ಗ್ರಾಮ‌ ಪಂಚಾಯತಿಯ ಸ್ವಚ್ಛತಾ ಸಿಬ್ಬಂದಿಗಳು ತೆರವುಗೊಳಿಸಿದ್ದು; ಕಸದ ರಾಶಿಯಲ್ಲಿದ್ದ ಹಲವಾರು ದಾಖಲೆಗಳ‌ ಪೈಕಿ ಸಿಕ್ಕಿರುವ ವಿಳಾಸದ ಆಧಾರದಲ್ಲಿ ಕಿನ್ನಿಗೋಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಎಳತ್ತೂರು ಗ್ರಾಮದ ನಿವಾಸಿಗೆ 2000 ರೂ ದಂಡ ವಿಧಿಸಲಾಗಿದೆ.

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಬಿಸಾಡುವವರಿಗೆ ದಂಡನೆ ವಿಧಿಸಿ ಸೂಕ್ತ ಕ್ರಮ‌ ಕೈಗೊಳ್ಳಲಾಗುವುದು ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹೇಳಿದ್ದಾರೆ.

Edited By : PublicNext Desk
Kshetra Samachara

Kshetra Samachara

26/12/2024 04:29 pm

Cinque Terre

852

Cinque Terre

0

ಸಂಬಂಧಿತ ಸುದ್ದಿ