ಮುಲ್ಕಿ:ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಸ್ವಚ್ಛ ಸಂಕೀರ್ಣ ಘಟಕದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಕಸದ ರಾಶಿ ಕಳೆದ ಕೆಲ ತಿಂಗಳಿಂದ ವಿಲೇವಾರಿಯಾಗದೆ ಹದ್ದು, ಬೀದಿನಾಯಿಗಳು ಮುಗಿಬಿದ್ದು ತನ್ನ ಆಹಾರವನ್ನ ಹುಡುಕುತ್ತಿರುವ ದೃಶ್ಯ ಕಾಣುತ್ತಿದೆ.
ಪ್ಲಾಸ್ಟಿಕ್ ಕಸದ ತ್ಯಾಜ್ಯ ವಿಲೇವಾರಿಯಾಗದೆ, ಪರಿಸರದ ಶಾಲೆಯ ವಿದ್ಯಾರ್ಥಿಗಳ ಆರೋಗ್ಯಕ್ಕೆ ತೀವ್ರ ತೊಂದರೆಯಾಗಿದೆ ಹಾಗೂ ಕೆಲ ವಿದ್ಯಾರ್ಥಿಗಳು ಶಾಲೆಯಲ್ಲಿ ವಾಂತಿ ಮಾಡಿದ ಘಟನೆ ಕೂಡ ಸಂಭವಿಸಿದ್ದು ರೋಗಗಳ ಭೀತಿ ಎದುರಾಗಿದೆ ಎಂದು ಸಂಬಂಧಪಟ್ಟ ಆಡಳಿತದ ವಿರುದ್ಧ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರೀತಿ ಪಟ್ಟಣ ಪಂಚಾಯತ್ ಕಚೇರಿಗೆ ಒಳಬರುವ ಪ್ರವೇಶ ದ್ವಾರದಲ್ಲಿ ಬಸ್ಸುಗಳ ನಿಲುಗಡೆ ಮಾಡಿ ಬಸ್ಸು ಶುಚಿಗೊಳಿಸುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ, ಬಸ್ ಶುಚಿಗೊಳಿಸಿದ ತ್ಯಾಜ್ಯ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದರೂ ಅಧಿಕಾರಿಗಳು ಮಾತ್ರ ಸ್ವಚ್ಛ ಎಂದು ತನ್ನ ಪಾಡಿಗೆ ತನ್ನಷ್ಟಕ್ಕೆ ಇರುತ್ತಾರೆ ಎಂದು ಸಾರ್ವಜನಿಕರು ಪಟ್ಟಣ ಪಂಚಾಯಿತಿಯ ಸ್ವಚ್ಛ ಆಡಳಿತವನ್ನು ಅಣಕಿಸಿದ್ದಾರೆ
ಸಾರ್ವಜನಿಕರಿಂದ ತೆರಿಗೆ ವಸೂಲಿ ಮಾಡುವ ಅಧಿಕಾರಿಗಳಿಗೆ, ಅದೇ ಜನರಿಗೆ ಮೂಲಭೂತ ಸೌಕರ್ಯ ನೀಡಬೇಕು ಎನ್ನುವ ಸಾಮಾನ್ಯ ಜ್ಞಾನ ಇಲ್ಲದಂತಾಗಿದೆ.
ಕೂಡಲೇ ಪಟ್ಟಣ ಪಂಚಾಯತ್ ಅಧಿಕಾರಿಗಳು ಎಚ್ಚೆತ್ತು ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
26/12/2024 02:31 pm