ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಕಂಪ್ಯೂಟರ್ ಪಿತಾಮಹ ಚಾಲ್ಸ್ ಬ್ಯಾಬೇಜ್ ಜನ್ಮದಿನ ಪ್ರಯುಕ್ತ ಕಂಪ್ಯೂಟರ್ ಆಪರೇಟರ್ ದಿನಾಚರಣೆ

ಚಿತ್ರದುರ್ಗ: ಚಿತ್ರದುರ್ಗದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಕಂಪ್ಯೂಟರ್ ಆಪರೇಟರ್ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕ ರಾಜ್ಯ ಗ್ರಾಮ ಪಂಚಾಯತಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳ ಕ್ಷೇಮಾಭಿವೃದ್ಧಿ ಸಂಘ ಇವರ ವತಿಯಿಂದ ಕಂಪ್ಯೂಟರ್‌ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕಂಪ್ಯೂಟರ್ ಅಪರೇಟರ್ ಗಳ ದಿನಾಚರಣೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲೆಯ ನಾನಾ ಭಾಗದಿಂದ ನೂರಾರು ಮಂದಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳು ಕಂಪ್ಯೂಟರ್ ಆಪರೇಟರ್ ಗಳು ಆಗಮಿಸಿದ್ದರು.

ಕಂಪ್ಯೂಟರ್ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸೊಂಡೆಕೊಳ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್ ಮಂಜಪ್ಪ, ಪಂಚಾಯತ್ ರಾಜ್ ನ ಸಹಾಯಕ ನಿರ್ದೇಶಕರಾದ ರೂಪ ಕುಮಾರಿ ಆರ್, ಪಿಡಿಓ ಸಂಘದ ಜಿಲ್ಲಾಧ್ಯಕ್ಷರಾದ ಪಾತಣ್ಣ, ಸಹಾಯಕ ಲೆಕ್ಕಾಧಿಕಾರಿಗಳಾದ ಕೆಂಚಪ್ಪ,  ನೌಕರರ ಸಂಘದ ನಿರ್ದೇಶಕರಾದ ಎನ್ ಮಾರುತಿ, ನೌಕರರ ಸಂಘದ ನಿರ್ದೇಶಕರಾದ ನಿಜಪ್ಪ ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

26/12/2024 03:12 pm

Cinque Terre

1.08 K

Cinque Terre

0

ಸಂಬಂಧಿತ ಸುದ್ದಿ