ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಆಡು ಮಲ್ಲೇಶ್ವರ ಕಿರು ಮೃಗಾಲಯದಲ್ಲಿ 'ಕರಡಿಗಳ ಬರ್ತ್‌ ಡೇ' ಸಂಭ್ರಮ

ಚಿತ್ರದುರ್ಗ: ಸಾಮಾನ್ಯವಾಗಿ ಮನುಷ್ಯರು ಮಾತ್ರ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಳ್ಳೋದು ಕಾಮನ್. ಆದರೆ ಇಲ್ಲಿ ಮಾತ್ರ ಥೇಟ್ ನಮ್ಮಂತೆ ಪ್ರಾಣಿಗಳಿಗೂ ಹುಟ್ಟು ಹಬ್ಬ ಆಚರಣೆ ಮಾಡಿದ್ದು ವಿಶೇಷವಾಗಿದೆ.

ಹೌದು.. ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಎರಡು ಮುದ್ದಾದ ಕರಡಿ ಮರಿಗಳಿಗೆ ಎರಡನೇ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡುವ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳು ಮಾನವೀಯತೆ ತೋರಿದ್ದಾರೆ. ಸೀನಮ್ಮ ಎಂಬ ಕರಡಿಯೊಂದು ಎರಡು ವರ್ಷಗಳ ಹಿಂದೆ, ಎರಡು ಹೆಣ್ಣು ಮರಿಗಳಿಗೆ ಜನ್ಮ ನೀಡಿತ್ತು. ಬಳಿಕ ಮೃಗಾಲಯ ಸಿಬ್ಬಂದಿ ಭಾನು- ಭೂಮಿ ಎಂದು ನಾಮಕರಣ ಮಾಡಿದ್ದರು.

ಇದೀಗ ಆ ಎರಡು ಕರಡಿ ಮರಿಗಳಿಗೆ ಎರಡನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ‌. ಇಂದು ಆಡು ಮಲ್ಲೇಶ್ವರ ಕಿರು ಮೃಗಾಲಯದ RFO ಅಕ್ಷತಾ ನೇತೃತ್ವದಲ್ಲಿ ಭಾನು- ಭೂಮಿ ಜೋಡಿ ಕರಡಿಗಳಿಗೆ ಕೇಕ್ ಕಟ್ ಮಾಡುವ ಮೂಲಕ ಬರ್ತ್ ಡೇ ಆಚರಣೆ ಮಾಡಿದ್ದಾರೆ. ಇನ್ನೂ ಮೃಗಾಲಯದ ಒಳ ಭಾಗದಲ್ಲಿ ಹಣ್ಣಿನಲ್ಲಿ ವಿನ್ಯಾಸ ಮಾಡುವ ಮೂಲಕ ಕರಡಿ ಮರಿಗಳಿಗೆ ವಿಷ್ ಮಾಡಿದ್ದಾರೆ.

ಇನ್ನೂ ಕರಡಿ ಮರಿಗಳ ಹುಟ್ಟುಹಬ್ಬ ಆಚರಣೆ ಕಂಡ ಪ್ರವಾಸಿಗರು ಕೂಡಾ ಸೆಲ್ಪಿ ಕ್ಲಿಕ್ಕಿಸಿಕೊಂಡು ಕರಡಿಗಳಿಗೆ ವಿಶ್ ಮಾಡಿದ್ದ ವಿಶೇಷವಾಗಿತ್ತು. ಒಟ್ಟಾರೇ ಚಿತ್ರದುರ್ಗದ ಆಡುಮಲ್ಲೇಶ್ವರ ಕಿರು ಮೃಗಾಲಯದ ಸಿಬ್ಬಂದಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Edited By : Manjunath H D
PublicNext

PublicNext

26/12/2024 02:10 pm

Cinque Terre

20.72 K

Cinque Terre

0

ಸಂಬಂಧಿತ ಸುದ್ದಿ