ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಳ್ಳಕೆರೆ: ರೈತರಿಗೆ ಸಿಗುವ ಸಬ್ಸಿಡಿ ಯೋಜನೆಗಳು ಸದುಪಯೋಗವಾಗಬೇಕು

ಚಳ್ಳಕೆರೆ: ಒಂದು ಹಸು ಸಾಕಾಣಿಕೆಯಿಂದ ಇಡೀ ಕುಟುಂಬದ ಆರ್ಥಿಕ ನಿರ್ವಹಣೆ ಕಂಡುಕೊಳ್ಳುವ ಜಾಣ್ಮೆ ರೈತರಲ್ಲಿ ಬೆಳೆಯಬೇಕು ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

ಚಳ್ಳಕೆರೆ ಶ್ರೀನರಹರೇಶ್ವರ ದೇವಸ್ಥಾನ ಆವರಣದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ, ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಿಶ್ರತಳಿ ಹಸು-ಕರುಗಳ ಪ್ರದರ್ಶನ ಮತ್ತು ಬರಡು ರಾಸುಗಳ ಚಿಕಿತ್ಸಾ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ,ದನಕರು ಸಾಕಾಣಿಕೆ ಮಾಡಿಕೊಂಡು ಕೃಷಿ ಮಾಡುವ ಮನೆತನಗಳಲ್ಲಿ ಉತ್ತಮ ಆರೋಗ್ಯ ಮತ್ತು ಆರ್ಥಿಕ ಸಬಲೀಕರಣ ಇರುತ್ತದೆ. ಪ್ರಸ್ತುತ ದಿನಗಳಲ್ಲಿ ಕೃಷಿ ಪದ್ದತಿ ಮತ್ತು ರೈತಾಪಿ ವರ್ಗದಲ್ಲಿ ಬದಲಾವಣೆ ಕಾಣುತ್ತೇವೆ. ಇದರಿಂದ ಗ್ರಾಮೀಣ ಭಾಗದಲ್ಲೂ ಜಾನುವಾರುಗಳ ಸಂತತಿ ಕ್ಷೀಣಿಸುತ್ತಿವೆ. ಸಹಕಾರ ಸಂಘಗಳ ಉದ್ದೇಶ ರೈತರ ಬಲವರ್ಧನೆ ಮತ್ತು ಹಾಲು ಉತ್ಪಾದಕರ ಪ್ರೋತ್ಸಾಹವಾಗಿದೆ. ರೈತರಿಗೆ ಸಿಗುವ ಸಬ್ಸಿಡಿ ಯೋಜನೆಗಳು ಸದುಪಯೋಗ ಆಗಬೇಕು ಎಂದರು.

Edited By : PublicNext Desk
Kshetra Samachara

Kshetra Samachara

25/12/2024 02:11 pm

Cinque Terre

680

Cinque Terre

0

ಸಂಬಂಧಿತ ಸುದ್ದಿ