ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಹೊಳಲ್ಕೆರೆ ರಸ್ತೆ ಮಾರ್ಗ ಬದಲಾವಣೆ

ಚಿತ್ರದುರ್ಗ: ಕೆ.ಎಂ.ಇ.ಆರ್.ಸಿ ಯೋಜನೆಯಡಿ ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರಿನಿಂದ ಚಿಕ್ಕಂದವಾಡಿ ಮೂಲಕ ಅಮೃತಾಪುರ ಹೋಗುವ 12 ಕಿ.ಮೀ. ರಿಂದ 16.50 ಕಿ.ಮೀ ವರೆಗಿನ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ರಸ್ತೆಯ ಕಾಂಕ್ರಿಟ್ ಕಾಮಗಾರಿ ಪ್ರಗತಿಯಲ್ಲಿದ್ದು, ಕ್ಯೂರಿಂಗ್ ಅವಧಿ ಮುಗಿಯುವವರೆಗೂ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಚಿಕ್ಕಂದವಾಡಿ ಮತ್ತು ಅರಸನಘಟ್ಟಗೆ ಹೋಗುವ ವಾಹನಗಳು, ಚಿಕ್ಕಜಾಜೂರು ಗ್ರಾಮದ ಮಾರುಕಟ್ಟೆ ಪ್ರಾಂಗಣದ ಮುಂಭಾಗದಿಂದ ಚನ್ನಪಟ್ಟಣ ಹೋಗುವ ರಸ್ತೆಯನ್ನು ಬಳಸಿಕೊಂಡು ಅಪ್ಪರಸನಹಳ್ಳಿ ಮೂಲಕ ಚಿಕ್ಕಂದವಾಡಿ ಕೆರೆಯ ಸಮೀಪ ಸೇರುವುದು. ಅಲ್ಲಿಂದ ಮುಂದೆ ಅಪ್ಪರಸನಹಳ್ಳಿ ಮೂಲಕ ಅರಸನಘಟ್ಟ ಗ್ರಾಮ ಸೇರಬಹುದು. ಹೊಳಲ್ಕೆರೆ ಪಟ್ಟಣಕ್ಕೆ ಹೋಗುವ ವಾಹನಗಳು ಚಿಕ್ಕಂದನವಾಡಿ ಮತ್ತು ಅರಸನಘಟ್ಟ ಗ್ರಾಮದಿಂದ ಅಪ್ಪರಸನಹಳ್ಳಿ ಹೋಗುವ ರಸ್ತೆಯನ್ನು ಬಳಸಿಕೊಂಡು, ಪಾಡಿಗಟ್ಟೆ ಅಥವಾ ಆಡನೂರು ರಸ್ತೆಯ ಮೂಲಕ ಹೊಳಲ್ಕೆರೆ ಪಟ್ಟಣ ಸೇರಬಹುದು ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

26/12/2024 02:42 pm

Cinque Terre

1,000

Cinque Terre

0

ಸಂಬಂಧಿತ ಸುದ್ದಿ