ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೌಡಿ ಶೀಟರ್‌ಗೆ ಹಾರ, ಶಾಲು, ಹಣ್ಣು ನೀಡಿ ಇನ್ಸ್ಪೆಕ್ಟರ್ ಕ್ಯಾಬಿನ್‌ನಲ್ಲಿ ರಾಜಾತಿಥ್ಯ - ಕಮಿಷನರ್‌ಗೆ ದೂರು ನೀಡಿದ ಸಿಬ್ಬಂದಿ

ಬೆಂಗಳೂರು: ನ್ಯೂ ಇಯರ್ ಹತ್ರ ಬರ್ತಿದೆ ರೌಡಿ ಶೀಟರ್‌ಗಳ ಹದ್ದಿನ ಕಣ್ಣಿಡಿ, ಅವ್ರನ್ನ ಠಾಣೆಗೆ ಕರೆಸಿ ಬಾಂಡ್ ಓವರ್ ಮಾಡಿಸಿ ಅಂತ ಕಮಿಷನರ್ ಕಟ್ಟಾಜ್ಞೆ ಮಾಡಿದ್ದಾರೆ. ಆದ್ರೆ ಇಲ್ಲೊಬ್ಬ ಇನ್ಸ್ಪೆಕ್ಟರ್ ರೌಡಿ ಶೀಟರ್‌ನ ಠಾಣೆಗೆ ಕರೆಸಿ ಹಾರ, ಶಾಲು ಗಿಫ್ಟ್ ನೀಡಿ ಸನ್ಮಾನಿಸಿದ್ದಾರೆ.

ರೌಡಿ ಶೀಟರ್ ಪ್ರಭಾಕರ್ ರೆಡ್ಡಿಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ನವೀನ್ ಜಿ. ಎಂ ಸನ್ಮಾನ ಮಾಡಿದ್ದಾರೆ. ಇನ್ಸ್ಪೆಕ್ಟರ್ ನವೀನ್, ಸಿಬ್ಬಂದಿಗಳಾದ ಶ್ರೀಶೈಲ, ಮುತ್ತುರಾಜ್ ಠಾಣಾ ಚೆಂಬರ್‌ನಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ರೌಡಿ ಶೀಟರ್ ಆದ ಪ್ರಭಾಕರ್ ರೆಡ್ಡಿಗೆ ರಾಜಾತಿಥ್ಯ ನೀಡಿರೋ ವಿಡಿಯೋ ಸಮೇತ ಕಮಿಷನರ್‌ಗೆ ದೂರು ನೀಡಿದ್ದಾರೆ.

ಒಬ್ಬ ರೌಡಿ ಶೀಟರ್‌ಗೆ ಠಾಣಾ ಇನ್ಸ್ಪೆಕ್ಟರ್ ಚೇಂಬರ್‌ನಲ್ಲಿ ರೌಡಿಯನ್ನ ಕರೆಸಿ ಸನ್ಮಾನಿಸಿ ಸತ್ಕರಿಸಿರುತ್ತಾರೆ. ಜವಾಬ್ದಾರಿಯುತ ಪೊಲೀಸ್ ಇಲಾಖೆಯಲ್ಲಿ ಇದ್ದುಕೊಂಡು ರೌಡಿ ಅಸಾಮಿಗಳಿಗೆ ಗುಲಾಮರಾಗಿ ಕೆಲಸ ಮಾಡುವ ಇಂತ ಅಧಿಕಾರಿಗಳಿಂದ ಹೇಗೆ ನ್ಯಾಯ ನಿರೀಕ್ಷಿಸಬಹುದೇ ? ಎಂದು ಸಿಬ್ಬಂದಿ ದೂರಿನಲ್ಲಿ ಪ್ರಶ್ನಿಸಿದ್ದಾರೆ.

ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ರೌಡಿ ಅಸಮಿಯು ನೀಡಿದ ದುಡ್ಡಿಗೆ ಗುಲಾಮರಾಗಿ ತಮ್ಮ ಸ್ವಂತಕ್ಕೆ ಬಳಸಿಕೊಂಡು ಪೊಲೀಸ್ ಇಲಾಖೆಯ ಮರ್ಯಾದೆ ಮತ್ತು ಮಾನ ಹರಾಜು ಹಾಕಿರುತ್ತಾರೆ. ಎಂದು ಕಮಿಷನರ್‌ಗೆ ಠಾಣ ಸಿಬ್ಬಂದಿ ಅನಾಮಧೇಯ ಪತ್ರದ ಮೂಲಕ ದೂರು ನೀಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ.

Edited By : Manjunath H D
PublicNext

PublicNext

26/12/2024 11:06 am

Cinque Terre

34.77 K

Cinque Terre

4

ಸಂಬಂಧಿತ ಸುದ್ದಿ