ಬೆಂಗಳೂರು: ಹೊಸ ವರ್ಷಕ್ಕೆ ರಾಜಧಾನಿ ಸಜ್ಜಾಗಿರುವ ಬೆನ್ನಲ್ಲೇ ಗಾಂಜಾ ಪೆಡ್ಲರ್ಸ್ ಫುಲ್ ಆಕ್ಟೀವ್ ಆಗಿದ್ದಾರೆ. ಪೊಲೀಸರು ಚಾಪೆ ಕೆಳಗೆ ತೂರಿದ್ರೆ ಪೆಡ್ಲರ್ಸ್ ಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಸಿಟಿ ಗಡಿ ಭಾಗದಲ್ಲಿ ಚೆಕ್ ಪೋಸ್ಟ್‌ಗಳನ್ನು ಹಾಕಿ ಪೊಲೀಸ್ ಪಡೆಗಳ ಚೆಕ್ಕಿಂಗ್ ಮಾಡ್ತಿದ್ದರು. ಪೊಲೀಸರಿಗೆ ಅನುಮಾನ ಬಾರದ ರೀತಿ ಮಾಡುತ್ತಿದ್ದಾರೆ. ಗಾಂಜಾ ಮತ್ತು ಡ್ರಗ್ಸ್ ಸಪ್ಲೈ ಮೇಲೆ ಎಲ್ಲಾ ವಾಹನಗಳ ಮೇಲೆ ಸಿಟಿ ಪೊಲೀಸರು ನಿಗಾ ವಹಿಸಿದ್ದಾರೆ. ಇದೇ ಸಮಯವನ್ನೇ ಟಾರ್ಗೆಟ್ ಮಾಡಿಕೊಂಡು ರೈಲಿನ ಮೂಲಕ ಕೆಜಿಗಟ್ಟಲೆ ಗಾಂಜಾ ಸಪ್ಲೈ ಮಾಡ್ತಿದ್ದಾರೆ.
ಪೊಲೀಸ್ ಶ್ವಾನಕ್ಕೂ ವಾಸನೆ ಬರದ ರೀತಿ ರೈಲು ಭೋಗಿಗಳಲ್ಲಿ ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾಗಳಿಂದ ನಗರಕ್ಕೆ ಗಾಂಜಾ ತರುತ್ತಿದ್ದಾರೆ.
ವಾಹನಗಳಲ್ಲಿ ಸರಬರಾಜು ಮಾಡಿದರೆ ಪೊಲೀಸರಿಗೆ ಸಿಕ್ಕಿ ಬೀಳುವ ಭಯದ ಹಿನ್ನೆಲೆ ರೈಲಿನ ಮೂಲಕ ನಗರಕ್ಕೆ ಗಾಂಜಾ ಸಪ್ಲೈ ಮಾಡುತ್ತಿದ್ದಾರೆ. ಹೊಸ ವರ್ಷಕ್ಕೆ ಬೆಂಗಳೂರು ಪಾರ್ಟಿಗಳು ಸೇರಿದಂತೆ ಸಬ್ ಪೆಡ್ಲರ್‌ಗಳಿಗೆ ಸಪ್ಲೈ ಮಾಡಲು ಗಾಂಜಾ ಸಪ್ಲೈ ಆಗ್ತಿದೆ ಅನ್ನೋ ಮಾಹಿತಿ ಮೇರೆಗೆ ರೈಲ್ವೆ ಪೊಲೀಸರಿಂದ ಸ್ಪೆಷಲ್ ಡ್ರೈವ್ ನಡೆಸಿ, ಪ್ರಶಾಂತಿ ಮತ್ತು ಹಟಿಯಾ ಎಕ್ಸ್‌ಪ್ರೆಸ್ ಭೋಗಿಗಳಲ್ಲಿ ತಲಾಶ್ ನಡೆಸಿದ್ದಾರೆ.
ಇದೇ ವೇಳೆ ಟ್ರ್ಯಾಲಿ ಬ್ಯಾಗ್‌ಗಳಲ್ಲಿ ಪ್ಯಾಕಿಂಗ್ ಮಾಡಿಕೊಂಡು ಗಾಂಜಾ ಸಾಗಾಟ ಮಾಡ್ತಿರೋದು ಬೆಳಕಿಗೆ ಬಂದಿದೆ. ಎರಡನೇ ದಿನದಲ್ಲಿ ಬರೋಬ್ಬರಿ ಒಂದು ಕೋಟಿ ಮೌಲ್ಯದ ಗಾಂಜಾ ಸೀಜ್ ಮಾಡಿದ್ದು, ಎಂಟು ಮಂದಿಯನ್ನು ಬಂಧಿಸಿ ರೈಲ್ವೆ ಪೊಲೀಸ್ರು ವಿಚಾರಣೆ ನಡೆಸುತ್ತಿದ್ದಾರೆ.
PublicNext
27/12/2024 01:17 pm