ಬೆಂಗಳೂರು: 57 ವರ್ಷದ ಅಂಕಲ್ ಹಾಗೂ 20 ವರ್ಷದ ಸುಂದರಿಯದ್ದು ಒಂದು ವರ್ಷದ ಗೆಳೆತನ. ಸುಂದರಿ ಕೇಳಿದ್ಲು ಅಂತ ಅಂಕಲ್ ಕೂಡ ಆಗಾಗ ಐದು, ಹತ್ತು ಸಾವಿರ ಹಣವನ್ನ ಕೊಡ್ತಿದ್ರಂತೆ. ಸಿವಿಲ್ ಕಂಟ್ರಾಕ್ಟರ್ ಆಗಿರೋ ಅಂಕಲ್ ಗೆ ಸುರಸುಂದರಿ ಸಖತ್ ಪ್ಲಾನ್ ಮಾಡಿ ಬಲೆ ಬೀಸಿದ್ಳು.
ಟೀ ಕುಡಿದುಕೊಂಡು ಹೋಗಿ ಅಂತ ಮನೆಗೆ ಕರೆದಿದ್ದಾಳೆ. ಸುಂದರಿ ಸ್ಮೈಲಿಗೆ ಕರಗಿದ ಅಂಕಲ್, ಸೀದಾ ಅವಳ ಸ್ಕೂಟಿ ಫಾಲೋ ಮಾಡಿಕೊಂಡು ಸುಂದರಿ ಮನೆಗೆ ಹೋದ ಅಂಕಲ್ ನ ಜೇಬು ಮತ್ತು ಕೈಯನ್ನು ಸುಂದರಿ ಆಂಡ್ ಗ್ಯಾಂಗ್ ಖಾಲಿ ಮಾಡಿ ಕಳುಹಿಸಿದೆ. ಬ್ಯೂಟಿ ಜೊತೆ ಅಂಕಲ್ ಜಾಲಿ-ಜಾಲಿಯಾಗಿದ್ದಾಗ ಅಪರಿಚಿತರು ಪೊಲೀಸ್ರು ಅಂತ ಎಂಟ್ರಿ ಕೊಟ್ಟಿದ್ದಾರೆ.
ವ್ಯಭಿಚಾರ ನಡೆಸ್ತಿದ್ದೀರಾ ಅಂತ ಪೊಲೀಸರ ಸೋಗಿನಲ್ಲೇ ಬ್ಲ್ಯಾಕ್ ಮೇಲ್ ಮಾಡಿ, ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ
ಫೋಟೊ ತೆಗೆದುಕೊಂಡಿದ್ದಾರೆ. ಕೆಳಗಡೆ ಮೇಡಂ ಇದ್ದಾರೆ, ಇಲ್ಲೇ ಸೆಟಲ್ ಮಾಡ್ಕೋ ಅಂತ ಅಂಕಲ್ ಗೆ ಬೆದರಿಸಿ ಜೇಬಲ್ಲಿದ್ದ 29 ಸಾವಿರ ನಗದು, ಫೋನ್ ಪೇನಲ್ಲಿ 26 ಸಾವಿರ ಹಾಗೂ ಮೈ ಮೇಲಿದ್ದ ಸುಮಾರು 5 ಲಕ್ಷದ ಚಿನ್ನದ ಸರ, ಉಂಗುರ ಬ್ರಾಸ್ ಲೇಟ್ ಕಿತ್ತುಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಇದಾದ ನಂತರ ಸುಂದರಿ ನಯನಾಗೆ ಅಂಕಲ್, ಬಾ ಹೋಗಿ ದೂರು ಕೊಡೋಣ ಅಂತ ಕರೆದ್ರೆ, ಬ್ಯೂಟಿ ನಯನಾ ಹೊಸ ವರಸೆ ತೆಗೆದಿದ್ದಾಳೆ. ಪೊಲೀಸ್ ಸ್ಟೇಷನ್ ಗೆ ಕಂಪ್ಲೈಂಟ್ ಅಂತ ಹೋದ್ರೆ ಮಗುನಾ ಕರ್ಕೊಂಡು ಸೀದಾ ನಿಮ್ಮ ಮನೆಗೆ ಬರ್ತೀನಿ ಅಂತ ಅಂಕಲ್ ನ ಮತ್ತೆ ಬ್ಲ್ಯಾಕ್ ಮೇಲ್ ಮಾಡಿದ್ದಾಳೆ. ಇದಾದ ನಂತರ ಧೈರ್ಯ ಮಾಡಿ ಬ್ಯಾಡರಹಳ್ಳಿ ಠಾಣೆಗೆ ನೊಂದ ಕಂಟ್ರಾಕ್ಟರ್ ಅಂಕಲ್ ದೂರು ನೀಡಿದ್ದಾರೆ.
ಸ್ನೇಹಿತನೊಬ್ಬನ ಮೂಲಕ 57 ವರ್ಷದ ಕಂಟ್ರಾಕ್ಟರ್ ಗೆ ನಯನಾ ಎಂಬ ಯುವತಿ ಪರಿಚಯವಾಗಿದ್ದು, ಆರಂಭದಲ್ಲಿ ಮಗುವಿಗೆ ಹುಷಾರಿಲ್ಲ ಅಂತ 5 ಸಾವಿರ, 10 ಸಾವಿರ ಹಣ ಹಾಕಿಸಿಕೊಂಡಿದ್ದ ನಯನಾ ಬಳಿಕ ನಿತ್ಯ ಕಾಲ್ ಮಾಡಿ ಮನೆ ಬನ್ನಿ ಅಂತ ಕರೆಯುತ್ತಿದ್ಳು.
ಡಿಸೆಂಬರ್ 9ರಂದು ಬೆಳಿಗ್ಗೆ ಬೈಕ್ ನಲ್ಲಿ ಮಾಗಡಿ ರಸ್ತೆಯಲ್ಲಿ ಹೋಗ್ತಿದ್ದ ಅಂಕಲ್ ನ ಹಿಂಬದಿಯಿಂದ ಸ್ಕೂಟರ್ ನಲ್ಲಿ ಬಂದ ನಯನಾ ಕರೆದು ಮಾತನಾಡಿಸಿ, ಇಲ್ಲೇ ಮನೆ. ಟೀ ಕುಡಿದು ಹೋಗಿ ಅಂತ ಮನೆಗೆ ಕರೆದುಕೊಂಡು ಹೋಗಿದ್ದು, ಈ ವೇಳೆ
ಮನೆಗೆ ಏಕಾಏಕಿ ಅಪರಿಚಿತ ವ್ಯಕ್ತಿಗಳ ಎಂಟ್ರಿಯಾಗಿ, ನಾವು ಕ್ರೈಂ ಪೊಲೀಸರು ಎಂದು ಬೆದರಿಸಿ ಅಂಕಲ್ ಮೇಲೆ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೋ ತೆಗೆದುಕೊಂಡು ಎರಡು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾಗಿ ದೂರು ನೀಡಿದ್ದಾರೆ. ಸದ್ಯ ಬ್ಯಾಡರಹಳ್ಳಿ ಪೊಲೀಸ್ರು
ಸುಲಿಗೆ ಗ್ಯಾಂಗ್ ನ ಸಂತೋಷ್, ಅಜಯ್, ಜಯರಾಜ್ ಎಂಬ ಖದೀಮರನ್ನು ಬಂಧಿಸಿದ್ದು, ನಾಪತ್ತೆಯಾಗಿರುವ ಮಾಟಗಾತಿ ನಯನಾಳಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
PublicNext
27/12/2024 08:57 am