ಬೆಂಗಳೂರು: ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಮತ್ತೊಂದು ವಕ್ಫ್ ಹೋರಾಟ ನಡೆಸಲು ತೀರ್ಮಾನಿಸಿದ್ದಾರೆ. ಜನವರಿ ತಿಂಗಳಲ್ಲಿ ಜಿಲ್ಲೆಗಳಿಗೆ ವಕ್ಫ್ ಬೋರ್ಡ್ ನಿಂದ ಆಗಿರುವ ಅನ್ಯಾಯದ ಕುರಿತು ಪರಿಶೀಲನೆ ನಡೆಸಲು ನಮ್ಮ ಟೀಮ್ ಜಿಲ್ಲಾ ಪ್ರವಾಸ ಕೈಗೊಳ್ಳುತ್ತವೆ ಎಂದು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಈ ಕುರಿತು ಸದಾಶಿವನಗರ ಕುಮಾರ್ ಬಂಗಾರಪ್ಪ ನಿವಾಸದಲ್ಲಿ ಸಭೆ ಬಳಿಕ ಮಾತನಾಡಿದ ಅವರು, ಈಗಾಗಲೇ ನಾವು ವಕ್ಪ್ ಹೋರಾಟ ಆರಂಭಿಸಿದ್ದೇವೆ. ಇಂದು ಕರ್ನಾಟಕದ ವಕ್ಪ್ ಅಧಿಕಾರಿಗಳನ್ನು ಜೆಪಿಸಿ ಮುಂದೆ ಕರೆದಿದ್ದಾರೆ. ನನಗೆ, ಪ್ರತಾಪಸಿಂಹ, ಕುಮಾರ ಬಂಗಾರಪ್ಪ ಅವರಿಗೆ ಇನ್ನೂ ಹೆಚ್ಚಿನ ಮಾಹಿತಿ ಕೊಡುವಂತೆ ಜೆಪಿಸಿ ಕೇಳಿದೆ. ಅದರ ಹಿನ್ನೆಲೆಯಲ್ಲಿ ಚರ್ಚೆ ಮಾಡಲು ಇವತ್ತು ಸಭೆ ಸೇರಿದ್ದೆವು. ಜನವರಿ ಮೊದಲ ವಾರದಲ್ಲಿ ಹೋಗಿ ಮಾಹಿತಿ ಕೊಡುವ ಕೆಲಸ ಮಾಡ್ತೀವಿ ಎಂದರು.
ಸದನದಲ್ಲಿ ಸರ್ಕಾರ ಕೊಟ್ಟ ಉತ್ತರದಿಂದ ನಮಗೆ ನಿರಾಸೆ ಆಗಿದೆ, ಇದು ಮುಸ್ಲಿಮರ ಪರವಾಗಿರುವ ಸರ್ಕಾರ ಜನವರಿಯಲ್ಲಿ ಕೆಲವು ಜಿಲ್ಲೆಗಳಿಗೆ ಯತ್ನಾಳ್ ನೇತೃತ್ವದಲ್ಲಿ ಪ್ರವಾಸ ಮುಂದುವರಿಸುತ್ತೇವೆ. ಇನ್ನೂ ಪ್ರವಾಸದ ದಿನಾಂಕ ನಿಗದಿ ಮಾಡಿಲ್ಲ ಎಂದು ತಿಳಿಸಿದರು.
ಇಂದು ನಾವು ಪ್ರತ್ಯೇಕ ಸಭೆ ಮಾಡಿಲ್ಲ ಇದು ಭಿನ್ನಮತ ಸಭೆಯೂ ಅಲ್ಲ ನಾವು ವಕ್ಪ್ ವಿಚಾರದ ಕುರಿತಾಗಿ ಸಭೆ ಮಾಡಿದ್ದೇವೆ ಎಂದು ಸ್ಪಷ್ಟನೆ ನೀಡಿದ ಅವರು, ನಮ್ಮ ಸಭೆಯ ಬಗ್ಗೆ ಮಾಜಿ ಶಾಸಕರು ಏನಾದರೂ ಹೇಳಿಕೊಳ್ಳಲಿ, ನಾವು ವಕ್ಫ್ ಹೋರಾಟ ಮಾಡುತ್ತಿದ್ದೇವೆ. ನಮ್ಮ ಮಟ್ಟದಲ್ಲಿ ಜನಪರ ಹೋರಾಟ ಮಾಡುತ್ತಿದ್ದೇವೆ ಎಂದರು.
PublicNext
26/12/2024 10:39 pm