ಬೆಂಗಳೂರು : ಬಸವೇಶ್ವರನಗರದ ಲಕ್ಷ್ಮಿ ದೇವಿ ನಗರದ ವೀರ ಕೇಸರಿ ಕನ್ನಡ ಯುವಕರ ಸಂಘದ ವತಿಯಿಂದ ಕನ್ನಡ ರಾಜ್ಯೋತ್ಸವ ಹಾಗೂ ಅಣ್ಣಮ್ಮ ದೇವಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ರದ್ದುಗೊಳಿಸಿದ ಶಾಸಕರಾದ ಕೆ.ಗೋಪಾಲಯ್ಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರ ಉತ್ತರ ಜಿಲ್ಲಾ ಘಟಕದ ಬಿಜೆಪಿ ಉಪಾಧ್ಯಕ್ಷ ಜಯರಾಮಯ್ಯ ಮುಖಂಡರುಗಳಾದ ನಿಸರ್ಗ ಜಗದೀಶ್, ಸಿಮೆಂಟ್ ಶ್ರೀನಿವಾಸ್, ಜಯಸಿಂಹ ,ರವಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
27/12/2024 01:51 pm