ಬೆಂಗಳೂರು : ನಾಯಿ ಮರಿಗೆ ಮಹಿಳೆಯೋರ್ವರು ಹೊಡೆದ ವಿಡಿಯೋ ಹಲ್ ಚಲ್ ಎಬ್ಬಿಸಿದೆ. ಮೂಕ ಪ್ರಾಣಿಯ ಮುಗ್ದತೆ ಕಂಡರೂ ಮನಸ್ಸು ಕರಗದೇ ಮೃಗದಂತೆ ವರ್ತಿಸಿದ ಆರೋಪ ಕೇಳಿ ಬಂದಿದೆ. ಗೇಟ್ ಗೆ ಟೈಟ್ ರೋಪ್ ಇಂದ ನಾಯಿಯನ್ನು ಕಟ್ಟಿ ಹಾಕಿ ಕಿರುಕುಳ ಕೊಟ್ಟಿರೋದ್ರ ಜೊತೆಗೆ ನಾಯಿ ಮರಿಗೆ ಹಿಗ್ಗಾ ಮುಗ್ಗಾ ಹೊಡೆದ ಆರೋಪ ಇದೆ.
ನಾಯಿ ಮರಿ ಡ್ರಾಮಾ ಮಾಡ್ತಿದೆ ಅದಕ್ಕೆ ಹೊಡೀತಿದೀನಿ ಅಂತ ಲೇಡಿ ಸಮಜಾಯಿಷಿ ಕೊಡ್ತಾರಂತೆ. ಬೀದಿಯಲ್ಲಿದ್ದ ನಾಯಿಯನ್ನಾ ಮನೆಗೆ ತಂದು ಈ ರೀತಿ ಸಾಕಿ ಚಿತ್ರ ಹಿಂಸೆ ಕೊಡೋ ಬದ್ಲು ಬೀದಿ ನಾಯಿಯನ್ನ ಬೀದಿಯಲ್ಲೇ ಬಿಟ್ಟಿದ್ರೆ ಬಹುಶಃ ಶ್ವಾನಕ್ಕೆ ಇಷ್ಟು ಹಿಂಸೆ ಆಗ್ತಾ ಇರಲಿಲ್ಲ ಅಂತ ಹೇಳಲಾಗ್ತಾ ಇದ್ದು ವೈಟ್ ಫೀಲ್ಡ್ ಸೆಕೆಂಡ್ ಕ್ರಾಸ್ ಅಲ್ಲಿ ನಡೆದ ಘಟನೆ ಅಂತ ತಿಳಿದು ಬಂದಿದೆ.
PublicNext
27/12/2024 12:10 pm