ಸಿದ್ದಾಪುರ: ಪಿಗ್ನಿ ಸಂಗ್ರಹಿಸುತ್ತಿದ್ದ ಒಂಟಿ ಮಹಿಳೆಯ ಮನೆಯ ಹಂಚು ತೆಗೆದು ಒಳ ನುಗ್ಗಿದ ದುಷ್ಕರ್ಮಿಗಳು ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿ, ಹಣ ದೋಚಿಕೊಂಡು ಹೋಗಿರುವ ಘಟನೆ ಸೊರಬ ರಸ್ತೆಯ ಬಸವನಗಲ್ಲಿಯಲ್ಲಿ ನಡೆದಿದೆ.
ಗೀತಾ ಪ್ರಭಾಕರ್ ಹುಂಡೇಕರ್ (72) ಕೊಲೆಯಾದ ಮಹಿಳೆ. ಈಕೆ ವಿನಾಯಕ ಸೌಹಾರ್ದ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯಲ್ಲಿ ಪಿಗ್ನಿ ಕಲೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಇವರು ನಿತ್ಯವೂ ಐದರಿಂದ ಹತ್ತು ಸಾವಿರದ ತನಕ ಪಿಗ್ನಿ ಹಣ ಸಂಗ್ರಹಿಸುತ್ತಿದ್ದು, ಪಿಗ್ನಿಕಲೆಕ್ಟ್ ಮಾಡಿದ ಹಣವನ್ನ ಮರುದಿನ ಬ್ಯಾಂಕ್‌ಗೆ ಜಮಾ ಮಾಡುತ್ತಿದ್ದರು.
ಮಹಿಳೆಯ ಬಳಿ ಹಣ ಇರುವುದನ್ನ ಖಚಿತ ಪಡಿಸಿಕೊಂಡ ದುಷ್ಕರ್ಮಿಗಳು ಮಹಿಳೆಯ ಬಚ್ಚಲ ಮನೆಯ ಹಂಚು ತೆಗೆದು ಮಹಿಳೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ ಆಕೆಯ ಬಳಿಯಿಂದ ಹಣವನ್ನ ಕದ್ದು ಪರಾರಿಯಾಗಿದ್ದಾರೆ. ಈ ಬಗ್ಗೆ ಮಹಿಳೆಯ ಸಂಬಂಧಿ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
Kshetra Samachara
25/12/2024 08:08 pm