ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರಸಭೆ ಕಟ್ಟಡವೇ ರೋಗವಾಹಕ ಸೊಳ್ಳೆಗಳ ತಾಣ!

ಉಡುಪಿ: ನಗರಸಭೆ ಕಛೇರಿ ಹಿಂಭಾಗಗ ಶೌಚ ತ್ಯಾಜ್ಯ ಸಾಗುವ ಚೇಂಬರುಗಳಿದ್ದು ಅವುಗಳಿಗೆ ಮುಚ್ಚಳ ಅಳವಡಿಸದೆ ಇರದಿರುವುದರಿಂದ ಪರಿಸರದಲ್ಲಿ ಗಬ್ಬು ವಾಸನೆ ಹಬ್ಬಿದೆ.ಇದರಿಂದಾಗಿ ಈ ಪರಿಸರದಲ್ಲಿ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ.

ನಗರಸಭೆ ಅಧಿಕಾರಿಗಳು ಸಿಬ್ಬಂದಿ ಹಾಗೂ ಕಛೇರಿ ಕೆಲಸಕ್ಕೆ ಬರುವ ಸಾರ್ವಜನಿಕರು ಬಳಸುವ ಶೌಚಾಲಯದ, ತ್ಯಾಜ್ಯ ನೀರು ಹರಿಯುವ ಚೆಂಬರುಗಳು ಇವುಗಳಾಗಿವೆ. ಸಮೀಪದಲ್ಲೇ ಜನ ವಸತಿ,‌ ಧಾರ್ಮಿಕ ಕೇಂದ್ರ, ಮಕ್ಕಳ ಆಸ್ಪತ್ರೆಯೂ ಇದೆ.‌ ಗಬ್ಬು ವಾಸನೆಯಿಂದ ಮೂಗು ಮುಚ್ಚಿ‌ಕೊಂಡು ತಿರುಗಾಡಬೇಕಾದ ಪರಿಸ್ಥಿತಿ ಇದೆ. ರೋಗ ವಾಹಕ ಸೊಳ್ಳೆಗಳ ಉತ್ಪಾದನೆಯ ಕೇಂದ್ರವಾಗಿದೆ. ತಕ್ಷಣ ನಗರಸಭೆ ಅಧಿಕಾರಿಗಳು, ಬಾಯಿ ತೆರೆದಿರುವ ಚೆಂಬರುಗಳಿಗೆ ಮುಚ್ಚಳ ಭದ್ರಪಡಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

25/12/2024 04:31 pm

Cinque Terre

1.02 K

Cinque Terre

0

ಸಂಬಂಧಿತ ಸುದ್ದಿ