ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ: ಸೀತಾನದಿ ಕಿಂಡಿ ಅಣೆಕಟ್ಟಿಗೆ ಫೈಬರ್ ಡೋರ್‌ ಅಳವಡಿಕೆ- ಭರಪೂರ ನೀರು ಶೇಖರಣೆ‌

ಬ್ರಹ್ಮಾವರ: ಬಾರಕೂರಿನಲ್ಲಿ ಹರಿಯುತ್ತಿರುವ ಸೀತಾನದಿಗೆ 30 ವರ್ಷಗಳ ಹಿಂದೆ ನೀಲಾವರದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿನಲ್ಲಿ ಈ ವರ್ಷ ದಾಖಲೆ ಮಟ್ಟದಲ್ಲಿ ನೀರು ಶೇಖರಣೆಗೊಂಡಿದ್ದು, ನದಿ ತೀರದ ಜನರು ಖುಷಿ ವ್ಯಕ್ತಪಡಿಸಿದ್ದಾರೆ.

ಆರಂಭದ ವರ್ಷದಲ್ಲಿ ಅಣೆಕಟ್ಟಿನ 52 ಕಿಂಡಿಗಳಿಗೆ ಮರದ ಕಿಂಡಿಯನ್ನು ಅಳವಡಿಸಲಾಗುತ್ತಿತ್ತು. ಆದರೆ, ಅದು ಕಿಂಡಿ ಅಣೆಕಟ್ಟಿನ ಕೆಳಭಾಗದಲ್ಲಿರುವ ಉಪ್ಪುನೀರಿನ ತೇವಾಂಶದಿಂದ ಹಾಳಾಗಿ ನೀರು ಸೋರಿ ಹೋಗಿ ನೀರು ಬರಿದಾಗುವುದು ಮತ್ತು ಸಿಹಿನೀರಿಗೆ ಉಪ್ಪು ನೀರು ಮಿಶ್ರಣಗೊಂಡು ಕೃಷಿಗೆ ಹಾನಿಯಾಗುತ್ತಿತ್ತು.

ಕಳೆದ ವರ್ಷದಿಂದ ಬೆಂಗಳೂರಿನ ಆಕ್ವಾ ಸೊಲ್ಯೂಷನ್ ಇಂಜಿನಿಯರಿಂಗ್ ನವರು ವಿಶೇಷವಾಗಿ ತಯಾರಿಸಿದ ಫೈಬರ್ ಡೋರ್ ಅಳವಡಿಕೆಯಿಂದ ನೀರು ಸೋರುವಿಕೆ ನಿಂತು ಈ ವರ್ಷ ಶೇಖರಣೆಯ ಪ್ರಮಾಣಕ್ಕಿಂತ ಹೆಚ್ಚು ಸಂಗ್ರಹಗೊಂಡು ಉಳಿಕೆ ನೀರು ಮಾತ್ರ ಹೊರ ಹೋಗುತ್ತಿದೆ.

ಮರದ ಕಿಂಡಿ ಪ್ರತೀ ವರ್ಷ ಹಾಳಾಗುವುದು ಮತ್ತು ನೀರಿನಲ್ಲಿ ಉಬ್ಬಿ ಮತ್ತೆ ಕಿಂಡಿಯನ್ನು ಹೊರತೆಗೆಯಲು ಆಗದೆ ಹಾಗೆ ಬಿಡುವ ಪ್ರಮೇಯಕ್ಕೆ ಫೈಬರ್ ಡೋರ್ ಉತ್ತಮ ಪರ್ಯಾಯವಾಗಿದ್ದು, ಕಿಂಡಿ ಅಣೆಕಟ್ಟು ರೈತರಿಗೆ ಉಪಯುಕ್ತವಾಗಿದೆ.

-ಶಿವರಾಮ ಆಚಾರ್ಯ, ಪಬ್ಲಿಕ್ ನೆಕ್ಸ್ಟ್ ಬ್ರಹ್ಮಾವರ

Edited By : Vinayak Patil
PublicNext

PublicNext

25/12/2024 05:46 pm

Cinque Terre

30.25 K

Cinque Terre

0

ಸಂಬಂಧಿತ ಸುದ್ದಿ