ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸ್ಥಳದಲ್ಲಿ ಮೊದಲ ಅಪಘಾತ : ಐವರಿಗೆ ಸಣ್ಣಪುಟ್ಟ ಗಾಯ

ಉಡುಪಿ : ನಗರದ ಅಂಬಲಪಾಡಿ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಹೊಂಡಕ್ಕೆ ಕಾರು ಮಗುಚಿಬಿದ್ದು ಮೊದಲ ಅಪಘಾತ ದಾಖಲಾಗಿದೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ‌.ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಕಾಮಗಾರಿಗೆ ಅಗೆದಿರುವ ಬೃಹತ್ ಹೊಂಡಕ್ಕೆ ಮಗುಚಿಬಿದ್ದ ಘಟನೆ ಅಂಬಲಪಾಡಿ ಜಂಕ್ಷನ್ ಬಳಿ ಇಂದು ಮುಂಜಾನೆ 3ಗಂಟೆಗೆ ಸಂಭವಿಸಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಕೇರಳ ನೋಂದಣಿ ಸಂಖ್ಯೆ ಹೊಂದಿರುವ ಕಾರಿನಲ್ಲಿ ಐದು ಮಂದಿ ಪ್ರಯಾಣಿಕರು ಕೊಲ್ಲೂರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್ ನಲ್ಲಿ ಮೇಲ್ಸೇತುವೆಯ ಪಿಲ್ಲರ್ ನಿರ್ಮಿಸಲು ಬಹೃತ್ ಹೊಂಡ ಅಗೆಯಲಾಗಿದ್ದು, ವಾಹನ ಸವಾರರು ಜಾಗರೂಕರಾಗಿರಬೇಕಿದೆ.

Edited By : Somashekar
PublicNext

PublicNext

27/12/2024 03:55 pm

Cinque Terre

27.97 K

Cinque Terre

0