ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿದ್ದಾಪುರದಲ್ಲಿ ಒಂಟಿ ವೃದ್ಧ ಮಹಿಳೆ ಸಾವು ಕೊಲೆ ಶಂಕೆ

ಸಿದ್ದಾಪುರ: ಸಿದ್ದಾಪುರದ ಮನೆಯೊಂದರಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧ ಮಹಿಳೆ ಸಾವನ್ನಪ್ಪಿರುವ ಘಟನೆ ಸೊರಬ ರಸ್ತೆಯ ಮನೆಯೊಂದರಲ್ಲಿ ನಡೆದಿದೆ.

ಖಾಸಗಿ ಬ್ಯಾಂಕ್ ಒಂದರ ಪಿಗ್ಮಿ ಕಲೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದ ಗೀತಾ ಹುಂಡೆಕರ್ (72) ಮೃತಪಟ್ಟ ಮಹಿಳೆಯಾಗಿದ್ದಾಳೆ. ಮಂಗಳವಾರ ರಾತ್ರಿ ಅಥವಾ ಸೋಮವಾರ ಘಟನೆ ನಡೆದಿರುವುದಾಗಿ ಅನುಮಾನ ವ್ಯಕ್ತವಾಗಿದೆ. ಹಣ ಅಥವಾ ಬಂಗಾರಕ್ಕೆ ಕೊಲೆ ಮಾಡಿರುವುದಾಗಿ ಶಂಕೆ ಮೂಡಿದೆ.

ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ

Edited By : PublicNext Desk
PublicNext

PublicNext

25/12/2024 01:07 pm

Cinque Terre

13.2 K

Cinque Terre

0