ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಲಿಟಲ್ ಸ್ಕಾಲರ್ ಶಾಲೆಯ ವಾರ್ಷಿಕೋತ್ಸವ

ಹುಬ್ಬಳ್ಳಿ : ಪ್ರತಿಯೊಬ್ಬ ಮಕ್ಕಳ ಶಿಕ್ಷಣವೇ ಅವರ ಮುಂದಿನ‌ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೇವಲ ಮಕ್ಕಳಿಗೆ ಪಠ್ಯದ ಶಿಕ್ಷಣ ನೀಡದೆ, ಪಠ್ಯೇತರ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಲಿಟಲ್ ಸ್ಕಾಲರ್ ಶಾಲೆ ಇಂದು ವಾರ್ಷಿಕೋತ್ಸವದಲ್ಲಿ ಶಾಲೆಯ ಪ್ರತಿಶತ 99% ಮಕ್ಕಳು ಭಾಗವಹಿಸಿರುವುದು ಪ್ರಮುಖ ವಿಷಯವಾಗಿತ್ತು.

ಹೌದು ಈ ಎಮ್.ಇ.ಟ್ರಸ್ಟ್ ನ ಲಿಟಲ್ ಸ್ಕಾಲರ್ ಶಾಲೆ 2002 ರಲ್ಲಿ ಕೇವಲ 12 ಮಕ್ಕಳಿಂದ ಶುರುವಾದ ಶಾಲೆ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ, ಈಗ ಸುಮಾರು 600ಕ್ಕೂ ಹೆಚ್ಚಿನ ಮಕ್ಕಳು ಲಿಟಲ್ ಸ್ಕಾಲರ್ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಸತತ 22 ವರ್ಷಗಳ ಸೇವೆಯ ಮೂಲಕ ಪಾಲಕರ ಮನ ಗೆದ್ದ ಲಿಟಲ್ ಸ್ಕಾಲರ್ ಶಾಲೆ.... ಆಕಿಬ್ ತರಫದಾರ , ಶಾಹಿನ್ ಕೌಸರ್‌ ತರಫದಾರ , ಸಯದ್ ಖಾಜಿಯವರ ಮಾರ್ಗದರ್ಶನಲ್ಲಿ ಮುಂದೆ ಸಾಗುತ್ತಿದೆ.

ಇಂದು ಶಾಲೆಯ ಮಕ್ಕಳು ಪಠ್ಯ ಪುಸ್ತಕಗಳನ್ನು ಬಿಟ್ಟು ಸಖತ್ ಏಂಜಾಯ್ ಮಾಡಿದ್ದರು. ಅದರ ಜೊತೆಗೆ ಎಷ್ಟೋ ಮುದ್ದು ಮಕ್ಕಳ ಪ್ರತಿಭೆಗೆ ಒಂದು ವೇದಿಕೆ ದೊರಕಿದಂತಾಯಿತು.

ಹಾಗೆಯೇ ಶಾಲೆಯ ಎಲ್ಲ ಶಿಕ್ಷಕರಿಗೆ ಸನ್ಮಾನಿಸಿ‌ ಗೌರವಿಸಲಾಯಿತು. ಅದೇ ತೆರನಾಗಿ ವರ್ಷದ ಅತ್ಯುತ್ತಮ ವಿದ್ಯಾರ್ಥಿ ಹಾಗೂ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವೇದಿಕೆ ಮೇಲೆ ಗೌರವಿಸಿ ಸನ್ಮಾನಿಸಲಾಯಿತು.

ಲಿಟಲ್ ಸ್ಕಾಲರ್ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಶಾಕೀರ್ ಸನಧಿ, ಉಮೇಶ್ ಬಮ್ಮಕನವರ, ಸಂತೋಷ ಲಂಬುಗೊಲ, ಕೇದಾರ ಕಬಡಗಿ, ಶ್ರೀನಿವಾಸ ಮಾನೆ, ರಂಜನ ಕೊರವಿ,ಶಾಹಿಲ್ ಬಂಡೆ, ಜಯಂತ ಗೌಳಿ ಸೇರಿದಂತೆ ಲಿಟಲ್ ಸ್ಕಾಲರ್ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

Edited By : Ashok M
Kshetra Samachara

Kshetra Samachara

24/12/2024 08:20 pm

Cinque Terre

25.03 K

Cinque Terre

1

ಸಂಬಂಧಿತ ಸುದ್ದಿ