ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಬಾಗಿರುವ ವಿದ್ಯುತ್ ತಂತಿಗಳು - ಆತಂಕದಲ್ಲಿ ಅನ್ನದಾತ

ಹಾವೇರಿ: ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಶಿರಬಡಗಿ ಗ್ರಾಮದ ರೈತರು ಇದೀಗ ಆತಂಕದಲ್ಲಿದ್ದಾರೆ. ಇವರ ಆತಂಕಕ್ಕೆ ಕಾರಣ ಜಮೀನುಗಳಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು, ಟ್ರಾನ್ಸಫಾರ್ಮರ್‌ಗಳು.

ವಿದ್ಯುತ್ ತಂತಿಗಳು ಕೈತಾಕುವಂತಿದ್ದರೆ ಟ್ರಾನ್ಸಫಾರ್ಮಗಳು ಬಾಗಿ ನೆಲಕ್ಕೆ ಬೀಳುವಂತಿವೆ. ಶಿರಬಡಗಿ ಗ್ರಾಮದ ರೈತ ಮುತ್ತನಗೌಡ ಮತ್ತು ಶಿವನಗೌಡ ಎಂಬುವರ ಜಮೀನಿನಲ್ಲಿ ಬಾಗಿ ನಿಂತಿರುವ ಟ್ರಾನ್ಸಫಾರ್ಮರ್ ಮತ್ತು ಜೋತು ಬಿದ್ದಿರುವ ವಿದ್ಯುತ್ ತಂತಿಗಳು, ಬೆಳೆಗಳಿಗೆ ತಗುಲಿ ಬೆಳೆಗಳು ಸುಟ್ಟು ಹಾಳಾಗಿವೆ.

ಜಮೀನಿನಲ್ಲಿ ಕೃಷಿ ಕೆಲಸ ಮಾಡುವ ರೈತರು ಜೋತು ಬಿದ್ದ ವಿದ್ಯುತ್ ತಂತಿಗಳು ಮತ್ತು ಬಾಗಿದ ಟ್ರಾನ್ಸಫಾರ್ಮರ್ ಗಳಿಂದ ಯಾವಾಗ ಏನಾಗುತ್ತದೆಯೋ ಎಂಬ ಜೀವ ಭಯದಲ್ಲಿ ಕಾಲ ಕಳೆಯುತ್ತಿದ್ದಾರೆ. ಗ್ರಾಮದ ರೈತರು ಮನವಿಗಳ ಮೇಲೆ ಮನವಿಗಳನ್ನು ಸಲ್ಲಿಸಿದ್ದಾರೆ. ಆದರೂ ಸಹ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಕಡೆ ಗಮನಹರಿಸಿಲ್ಲ ಎಂದು ಆರೋಪಿಸಿದ್ದಾರೆ.

Edited By : Shivu K
PublicNext

PublicNext

24/12/2024 06:45 pm

Cinque Terre

24.57 K

Cinque Terre

0

ಸಂಬಂಧಿತ ಸುದ್ದಿ