ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ; ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ವಾಪಸ್

ಹಾವೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಾವೇರಿ ರೈತಸಂಘ ಮತ್ತು ಹಸಿರುಸೇನೆ ನಡೆಸುತ್ತಿದ್ದ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಅಂತ್ಯಗೊಂಡಿದೆ. ಇದರೊಂದಿಗೆ ಹಾವೇರಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನ 12 ದಿನಗಳ ನಂತರ ರೈತರು ವಾಪಸ್ ಪಡೆದಿದ್ದಾರೆ. ಪ್ರತಿಭಟನೆ ಜಿಲ್ಲೆಗೆ ಪ್ರತ್ಯೆಕ ಡಿ.ಸಿ.ಸಿ ಬ್ಯಾಂಕ್ ಸ್ಥಾಪನೆ , ಬೇಡ್ತಿ-ವರದಾ ನದಿ ಜೋಡಣೆ ಸೇರಿದಂತೆ ಸುಮಾರು 8 ಕ್ಕೂ ಅಧಿಕ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತಸಂಘ ಹಗಲು ರಾತ್ರಿ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿತ್ತು.

ಪ್ರತಿಭಟನಾನಿರತ ರೈತರನ್ನು ಮಾತುಕತೆಗೆ ಕರೆದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮತ್ತು ಜಿಲ್ಲೆಯ ಶಾಸಕರ ನಡುವೆ ಈ ಕುರಿತಂತೆ ಸಂಧಾನ ಯಶಸ್ವಿಯಾಗಿದ್ದು ಸತ್ಯಾಗ್ರಹ ವಾಪಸ್ ಪಡೆದಿರುವದಾಗಿ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು. ನಮ್ಮ ಬೇಡಿಕೆ ಕುರಿತಂತೆ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂಧಿಸಿದೆ. ನಮ್ಮ ಬೇಡಿಕೆಗಳನ್ನ ಜನೆವರಿ ಅಂತ್ಯದವರೆಗೆ ತೀರಿಸುವಂತೆ ರೈತರು ಆಗ್ರಹಿಸಿದರು.

ಒಂದು ವೇಳೆ ಜನೆವರಿಯೊಳಗೆ ತೀರಿಸದಿದ್ದರೇ ಫೆಬ್ರುವರಿ ಒಂದರಿಂದ ಮತ್ತೆ ಪ್ರತಿಭಟನೆ ನಡೆಸುವದಾಗಿ ರೈತ ಮುಖಂಡರು ಎಚ್ಚರಿಕೆ ನೀಡಿದರು. ಬೆಳೆವಿಮೆ, ಬೆಳೆನಷ್ಟಪರಿಹಾರ, ಅತಿವೃಷ್ಠಿ ಅನಾವೃಷ್ಠಿ ಪರಿಹಾರ ವಿತರಣೆ ಸೇರಿದಂತೆ ಸುಮಾರು 20 ಬೇಡಿಕೆಗಳ ಈಡೇರಿಕೆಗೆ ರೈತರು ಮನವಿ ಮಾಡಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತ ತಮಗೆ ಭರವಸೆ ನೀಡಿದ್ದರಿಂದ ಪ್ರತಿಭಟನೆ ವಾಪಸ್ ಪಡೆದಿದ್ದೇವೆ. ಇಲ್ಲದಿದ್ದರೇ ಮುಂದಿನ ದಿನಗಳಲ್ಲಿ ಮತ್ತೆ ಹೋರಾಟ ಆರಂಭಿಸುವದಾಗಿ ರೈತರು ಎಚ್ಚರಿಕೆ ನೀಡಿದರು.

Edited By : PublicNext Desk
PublicNext

PublicNext

18/12/2024 08:09 pm

Cinque Terre

19.17 K

Cinque Terre

0