ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಗೃಹಲಕ್ಷ್ಮಿ ಹಣದಿಂದ ರೋಟೋವೇಟರ್ ಖರೀದಿ- ಗ್ರಾಮಕ್ಕೆ ಮಾದರಿಯಾದ ಅತ್ತೆ, ಸೊಸೆ

ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಅತ್ತೆ- ಸೊಸೆ ತಮಗೆ ಬಂದ ಗೃಹಲಕ್ಷ್ಮಿ ಹಣದಿಂದ ಕೃಷಿಗೆ ಉಪಯೋಗವಾಗುವ ರೋಟೋವೇಟರ್ ಖರೀದಿ ಮಾಡಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕು ಮಂಟಗಣಿ ಗ್ರಾಮದ ಶಾರದಾ ಮತ್ತು ಲಕ್ಷ್ಮಿ ರೋಟೋ ವೇಟರ್ ಖರೀದಿಸಿದ ಅತ್ತೆ ಸೊಸೆ. ಇಬ್ಬರೂ ತಮಗೆ ಬಂದ 14 ತಿಂಗಳುಗಳ ತಲಾ 28 ಸಾವಿರ ರೂಪಾಯಿಗಳನ್ನು ಕೂಡಿಸಿ ಮನೆಮಗ ಅಜಿತ್‌ ಗೆ ನೀಡಿದ್ದಾರೆ. ಹೀಗೆ 56 ಸಾವಿರ ರೂಪಾಯಿ ಅಜಿತ್‌ಗೆ ನೀಡಿದ್ದಾರೆ.

ಗೃಹಲಕ್ಷ್ಮಿ ಹಣ ಜತೆಗೆ ಉಳಿದ ಹಣವನ್ನು ಸ್ವಸಹಾಯ ಸಂಘದಿಂದ ಸಾಲ ಪಡೆದ ಅತ್ತೆ- ಸೊಸೆ, ಅಜಿತ್‌ಗೆ ರೋಟೋ ವೇಟರ್ ಕೊಡಿಸಿದ್ದಾರೆ. ಅಜಿತ್ ಈಗ ಸುಮಾರು 1 ಲಕ್ಷ 10 ಸಾವಿರ ರೂಪಾಯಿ ಕೊಟ್ಟು ಹೊಸ ರೋಟೋ ವೇಟರ್ ತಂದಿದ್ದಾರೆ. ಇದಕ್ಕೆ ಸರ್ಕಾರದಿಂದ ಸಬ್ಸಿಡಿ ಇದ್ದು ಸೂಕ್ತ ದಾಖಲೆ ನೀಡಿದರೆ ರೋಟೋ ವೇಟರ್ ಅಂಗಡಿಯವರು 10 ಸಾವಿರ ರೂಪಾಯಿ ಸಬ್ಸಿಡಿ ನೀಡಲಿದ್ದಾರೆ.

ಶಾರದಾ ಮತ್ತು ಲಕ್ಷ್ಮಿ ಪ್ರತಿ ತಿಂಗಳು ಖಾತೆಗೆ ಬಂದ ಗೃಹಲಕ್ಷ್ಮಿ ಹಣವನ್ನು ವಿತ್‌ ಡ್ರಾ ಮಾಡಿಕೊಂಡು ಕೂಡಿಸಿ ಇಟ್ಟುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಬಡವರಿಗಾಗಿ ಈ ಯೋಜನೆ ಜಾರಿಗೆ ತಂದಿದ್ದಾರೆ. ಈ ಯೋಜನೆಯ ಹಣವನ್ನು ದುಂದುವೆಚ್ಚ ಮಾಡುವುದು ಬೇಡ ಎಂದು ಕೂಡಿಸಿದ್ದಾರೆ. ಅಜಿತ್‌ ಗೆ ಈ ಹಣ ನೀಡಿದರೆ ಸದುಪಯೋಗವಾಗುತ್ತೆ ಎಂದು ಅತ್ತೆ- ಸೊಸೆ ಈ ಹಣವನ್ನು ಅಜಿತ್‌ಗೆ ಕೊಟ್ಟಿದ್ದಾರೆ.

Edited By : Shivu K
PublicNext

PublicNext

22/12/2024 09:08 pm

Cinque Terre

35.3 K

Cinque Terre

3

ಸಂಬಂಧಿತ ಸುದ್ದಿ