ಹಾವೇರಿ: ಹಾವೇರಿ ತಾಲೂಕು ಮರಡೂರು ಗ್ರಾಮದ ಬಳಿ ವರದಾ ನದಿಗೆ ಕಟ್ಟಿರುವ ಬ್ಯಾರೇಜ್ ಕಂ ಬ್ರಿಡ್ಜ್ ನಲ್ಲಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ. ಇದಕ್ಕೆ ಅವೈಜ್ಞಾನಿಕ ಕ್ರಸ್ಟ್ ಗೇಟ್ ಅಳವಡಿಸಿರುವುದೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಸರಿಯಾದ ಗೇಟ್ ಹಾಕದ ಹಿನ್ನೆಲೆಯಲ್ಲಿ ನೀರು ಹೆಚ್ಚು ಪೋಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬ್ಯಾರೇಜ್ ಸಂಪೂರ್ಣ ತುಂಬಿದೆ.
ಗಟ್ಟಿಮುಟ್ಟಾದ ಗೇಟ್ ಅಳವಡಿಕೆ ಮಾಡಿಲ್ಲ. ಬ್ಯಾರೇಜ್ ಅಳವಡಿಸಿದ್ದ ಗೇಟ್ ತುಕ್ಕು ಹಿಡಿದಿವೆ. ಸರಿಯಾದ ರಬ್ಬರ್ ಸಹ ಹಾಕಿಲ್ಲ. ಇದರಿಂದಾಗಿ ಅಪಾರ ಪ್ರಮಾಣದ ನೀರು ಪೋಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
PublicNext
19/12/2024 10:44 pm