ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: “ನಮ್ ಬಸ್ ಹತ್ತಬೇಡಿ, ಹತ್ತಿದ್ರೆ ಸರಿ ಇರಲ್ಲ…” - ಕಾಲೇಜು ವಿದ್ಯಾರ್ಥಿನಿಯರ ಮೇಲೆ ದರ್ಪ ತೋರಿದ ಲೇಡಿ ಕಂಡಕ್ಟರ್

ಹಾವೇರಿ: ಶಕ್ತಿ ಯೋಜನೆ ಬಂದಾಗಿಂದ ಕಾಲೇಜು ವಿದ್ಯಾರ್ಥಿಗಳು ಬಸ್‌ ಗಾಗಿ ಪರದಾಡುತ್ತಿದ್ದಾರೆ. ಅದೇ ರೀತಿ ಹಾವೇರಿಯಲ್ಲಿ ಬಸ್ ಕಂಡಕ್ಟರ್ ಒಬ್ಬರು ಕಾಲೇಜು ವಿದ್ಯಾರ್ಥಿನಿಯರಿಗೆ ಬಸ್ ಹತ್ತಿದ್ರೆ ಕೆಳಗಡೆ ಇಳಿಯುವಂತೆ ವಾರ್ನ್ ಮಾಡುವ ವಿಡಿಯೋ ಈಗ ಸಖತ್ ವೈರಲ್ ಆಗ್ತಿದೆ.

ಒಂದು ಬಸ್‌ನಲ್ಲಿ ಐದೇ ವಿದ್ಯಾರ್ಥಿನಿಯರು ಬರಬೇಕು ಎಂದು ನಿಯಮ ತಾವೇ ಮಾಡಿಕೊಂಡಿದ್ದಾರೆ ಈ ಲೇಡಿ ಕಂಡೆಕ್ಟರ್. ಹಾವೇರಿ ಜಿಲ್ಲೆಯ ರಾಣೆಬೆನ್ನೂರ ತಾಲೂಕಿನ ಹಲಗೇರಿ ರಸ್ತೆಯಲ್ಲಿರುವ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆಯ ವಿದ್ಯಾರ್ಥಿನಿಯರ ವಸತಿ ನಿಲಯ ಹಾಗೂ ವಿವಿಧ ಕಾಲೇಜುಗಳಿಗೆ ಬರುವ 150 ವಿದ್ಯಾರ್ಥಿನಿಯರು ಕಾಲೇಜಿಗೆ ಹೋಗಲು ಸರಿಯಾಗಿ ಬಸ್‌ಗಳು ಸಿಗದೆ ಗೋಳಾಡುತ್ತಿದ್ದಾರೆ. ಕರುಣೆಯಿಂದ ಬಸ್ ಡ್ರೈವರ್ ಬಸ್ ಸ್ಟಾಪ್ ಮಾಡಿದ್ರೆ ವಿದ್ಯಾರ್ಥಿನಿಯರು ಹತ್ತಿದ ಕೂಡಲೇ ಕಂಡಕ್ಟರ್ ಅವರಿಗೆ ಅವಾಜ್ ಹಾಕಿ ಎಲ್ಲರೂ ಹತ್ತಬೇಡಿ ಎಂದು ವಿದ್ಯಾರ್ಥಿನಿಯರ ಜೊತೆಗೆ ಮಹಿಳಾ ಕಂಡಕ್ಟರ್ ದರ್ಪ, ಅನುಚಿತ ವರ್ತನೆ ತೋರುತ್ತಾರೆ.

ವಿದ್ಯಾರ್ಥಿನಿಯರಿಗೆ ಮಹಿಳಾ ಕಂಡಕ್ಟರ್ ನಮ್ಮ ಬಸ್ ಮಾತ್ರವೇ ಇರೋದಾ..? ಬೇರೆ ಬಸ್ ಗೆ ಹೋಗಿ ನಮ್ಮ ಬಸ್ ಹತ್ತಬೇಡಿ ನಿಲ್ಲಿಸಬೇಡಿ ಎಂದು ಇದೇ ಕೊನೆ. ಇನ್ನೊಮ್ಮೆ ಈ ರೀತಿ ನಮ್ಮ ಬಸ್ ಗೆ ಬಂದರೆ ಸರಿ ಇರುವುದಿಲ್ಲ ಎಂದು ಕೈ ಮಾಡಿ ನಿರ್ವಾಹಕಿ ದರ್ಪ ತೋರಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯ, ದರ್ಪಕ್ಕೆ ಕೊನೆ ಎಂದು..? ಈ ರೀತಿ ಅಮಾನವೀಯವಾಗಿ ನಡೆದುಕೊಳ್ಳುತ್ತಿರುವ ಕಂಡಕ್ಟರ್ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಸಾರಿಗೆ ಹಿರಿಯ ಅಧಿಕಾರಿಗಳಿಗೆ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ. ಸರ್ಕಾರ ಇತ್ತ ಗಮನಿಸಿ ಈ ವಿದ್ಯಾರ್ಥಿನಿಯರಿಗೆ ಬಸ್ ವ್ಯವಸ್ಥೆ ಮಾಡಿಕೊಡಬೇಕಾಗಿದೆ.

Edited By : Suman K
PublicNext

PublicNext

14/12/2024 05:47 pm

Cinque Terre

15.52 K

Cinque Terre

5

ಸಂಬಂಧಿತ ಸುದ್ದಿ