ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಗುರುಗಳ ಕಾಲಿಗೆ ನಮಸ್ಕರಿಸಿದ ಹೈಕೋರ್ಟ್ ನ್ಯಾ.ಕೃಷ್ಣ ಎಸ್.ದೀಕ್ಷಿತ್, ಹುದ್ದೆಗಿಂತ ಗುರುವಿ‌ನ ಸ್ಥಾನ ದೊಡ್ಡದು…

ಹಾವೇರಿ: ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮಕ್ಕೆ ಭೇಟಿ ನೀಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತರು ತಮಗೆ ಕಲಿಸಿದ ಗುರುಗಳು ಕಾಣುತ್ತಿದ್ದಂತೆ ಹುದ್ದೆಗಿಂತ ಗುರುವಿ‌ನ ಸ್ಥಾನ ದೊಡ್ಡದು ಎಂದು ಗುರುಗಳ ಕಾಲಿಗೆ ನಮಸ್ಕರಿಸಿದ್ದಾರೆ.

ಮಾಸೂರಿಗೆ ಭೇಟಿ ನೀಡಿದ ವೇಳೆ ಮಾಸೂರಿನಲ್ಲಿರುವ ತ್ರಿಪದಿ ಕವಿ ಸರ್ವಜ್ಞನ ಐಕ್ಯಸ್ಥಳಕ್ಕೆ ಭೇಟಿ ನೀಡಿ ಅವರು ವೀಕ್ಷಿಸಿದರು. ಸರ್ವಜ್ಞನ ಐಕ್ಯಸ್ಥಳದ ಕುರಿತು ಗ್ರಾಮದ ಜನರಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಗ್ರಾಮದ ಜನರು ಕೂಡಲಸಂಗಮ ಮಾದರಿಯಲ್ಲಿ ಸರ್ವಜ್ಞನ ಐಕ್ಯಸ್ಥಳವನ್ನು ಅಭಿವೃದ್ಧಿ ಮಾಡಬೇಕು. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಕೇಂದ್ರ ಕಛೇರಿಯ ವಿವಾದವನ್ನು ತಮ್ಮ ಮಧ್ಯಸ್ಥಿಕೆಯಲ್ಲಿ ಬಗೆಹರಿಸಿ ಅಭಿವೃದ್ಧಿ ಕಾರ್ಯಗಳಿಗೆ ಮುನ್ನುಡಿ ಬರೆಯಬೇಕು ಎಂದು ವಿನಂತಿಸಿ ಮನವಿ ಸಲ್ಲಿಸಿದರು.

ಸರ್ವಜ್ಞನ ಐಕ್ಯ ಮಂಟಪವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಬೇಕು. ಸರ್ವಜ್ಞರಿಗೆ ಯಾವುದೇ ಸಂಬಂಧವಿರದ ಹಿರೇಕೆರೂರಿನಲ್ಲಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರದ ಕಛೇರಿ ನಿರ್ಮಿಸಲು ಹೊರಟಿದ್ದು, ಇದಕ್ಕೆ ಮಾಸೂರು ಗ್ರಾಮಸ್ಥರ ಸಂಪೂರ್ಣ ವಿರೋಧವಿದೆ ಎಂದು ಗ್ರಾಮದ ಜನರು ಮನವಿ ಪತ್ರದಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ತಿಳಿಸಿದ್ದಾರೆ.

Edited By : Somashekar
PublicNext

PublicNext

14/12/2024 07:36 pm

Cinque Terre

16.01 K

Cinque Terre

0