ಹಾವೇರಿ: ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದರೆ ಅತ್ತೆ ಸೊಸೆ ಜಗಳವಾಗುತ್ತೆ ಎಂದು ಆರೋಪಿಸಲಾಗುತ್ತಿತ್ತು. ಆದರೆ ಅತ್ತೆ ಸೊಸೆ ಕೂಡಿಕೊಂಡು ಗೃಹಲಕ್ಷ್ಮೀ ಹಣ ಕೂಡಿಸಿಟ್ಟು ರೋಟೋವೇಟರ್ ಖರೀದಿಸಿದ್ದಾರೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಂಟಗಣಿ ಗ್ರಾಮದ ಅತ್ತೆ ಶಾರದಾ ಜಗಣ್ಣನವರ ಮತ್ತು ಸೊಸೆ ಲಕ್ಷ್ಮೀ ಜಗಣ್ಣವರ ಎಂಬುವರು ರೋಟೋವೇಟರ್ ಖರೀದಿಸಿದ್ದಾರೆ. ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಸೇರಿಸಿಟ್ಟ ಅತ್ತೆ ಸೊಸೆ ರೋಟೋವೇಟರ್ ಖರೀದಿಸಿದ್ದಾರೆ.
ಕೃಷಿ ಕೆಲಸಕ್ಕೆ ರೋಟೋವೇಟರ್ ಅಗತ್ಯವಿದೆ. ಆದರೆ ಮನೆಯಲ್ಲಿ ಕೃಷಿ ಕೆಲಸಕ್ಕೆ ರೋಟೋವೇಟರ್ ಇಲ್ಲದಾಗಿತ್ತು. ಹೀಗಾಗಿ ಅತ್ತೆ ಸೊಸೆ ಇಬ್ಬರೂ ಗೃಹಲಕ್ಷ್ಮೀ ಹಣವ ಸೇರಿಸಿ ರೋಟೋವೇಟರ್ ಖರೀದಿಸಿದ್ದಾರೆ.
PublicNext
21/12/2024 08:53 pm