ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ: ಚಿತ್ರ ರಚಿಸುವ ಮೂಲಕ ಶ್ರದ್ಧಾಂಜಲಿ

ಹಾವೇರಿ: ಖ್ಯಾತ ತಬಲಾವಾದಕ ಉಸ್ತಾದ ಝಾಕೀರ್ ಹುಸೇನ್ ಭಾನುವಾರ ತಡರಾತ್ರಿ ನಿಧನರಾಗಿದ್ದಾರೆ. ಸಂಗೀತ ಲೋಕದ ಕೊಂಡಿಯೊಂದು ಕಳಚಿದಂತಾಗಿದೆ. ಅವರ ನಿಧನಕ್ಕೆ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ಹಾವೇರಿಯ ಅಂತರಾಷ್ಟ್ರೀಯ ಚಿತ್ರ ಕಲಾವಿದ ಕರಿಯಪ್ಪ ಹಂಚಿನಮನಿ ವಿಭಿನ್ನ ರೀತಿಯಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ತಮ್ಮ ಕ್ಯಾನವಾಸ್‌ನಲ್ಲಿ ಅರ್ಕಾಲಿಕ್ ಪೇಂಟ್‌ನಲ್ಲಿ ಜಾಕೀರ್ ಹುಸೇನ್ ಭಾವಚಿತ್ರ ರಚಿಸುವ ಮೂಲಕ ಕಂಬನಿ ಮಿಡಿದಿದ್ದಾರೆ.

ಉಸ್ತಾದ ಜಾಕೀರ್ ಹುಸೇನ್ ತಬಲಾ ವಾದನವನ್ನ ಕೇಳಿಕೊಂಡೇ ನಾವು ಬೆಳೆದವರು. ಅವರ ತಬಲಾ ವಾದನ ಅವರ ಅಭಿಮಾನಿಯನ್ನಾಗಿ ಮಾಡಿತ್ತು. ಬದುಕಿನ ಜಂಜಾಟ ಒತ್ತಡಗಳು ಬಂದಾಗ ಜಾಕೀರ್ ಹುಸೇನ್ ತಬಲಾ ವಾದನ ಕೇಳಿದರೆ ಸಾಕು ನೆಮ್ಮದಿ ತರುತ್ತಿತ್ತು ಎಂದು ಹಂಚಿನಮನಿ ಕಂಬನಿ ಮಿಡಿದಿದ್ದಾರೆ.

Edited By : Ashok M
PublicNext

PublicNext

17/12/2024 08:06 am

Cinque Terre

27.61 K

Cinque Terre

0