ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಗಾಂಧೀ ಭಾರತ ಕಾರ್ಯಕ್ರಮದ ಮಾಹಿತಿ ನೀಡಿದ ಡಿ.ಕೆ.ಶಿವಕುಮಾರ್

ಬೆಳಗಾವಿ: ಶತಮಾನೋತ್ಸವಕ್ಕಾಗಿ ಬೆಳಗಾವಿ ನಗರದಾದ್ಯಂತ ದೀಪಾಲಂಕಾರ ಮಾಡಲಾಗಿದೆ. ಕಿತ್ತೂರು ಕರ್ನಾಟಕ ಭಾಗದ ಜನರು ಬೆಳಗಾವಿಗೆ ಬಂದು ಅದ್ಭುತ ಕ್ಷಣ ಕಣ್ತುಂಬಿಕೊಳ್ಳಬೇಕು ಎಂದು ಬೆಳಗಾವಿಯಲ್ಲಿ ನಡೆಯಲಿರುವ ಐತಿಹಾಸಿಕ ಕಾರ್ಯಕ್ರಮದ ಬಗ್ಗೆ ಡಿಸಿಎಂ ಡಿಕೆಶಿ ಮಾಹಿತಿ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನೋತ್ಸವ ಸಂಭ್ರಮ ಇದೆ.‌ ಬೆಳಗಾವಿಯಲ್ಲಿ ನಡೆದ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ವಿಶೇಷ ಸಂದರ್ಭವಾಗಿದೆ.‌ ಈಗ ಮತ್ತೊಂದು ಇತಿಹಾಸ ಸೃಷ್ಟಿ ಮಾಡುವ ಕಾರ್ಯಕ್ರಮ ನಡೆಯಲಿದೆ. ಕಾಂಗ್ರೆಸ್ ಅಧಿವೇಶನಕ್ಕೆ ಜನರು ಪಕ್ಷಾತೀತವಾಗಿ ಭಾಗವಹಿಸಬೇಕು. ಇಂಥ ಕಾರ್ಯಕ್ರಮಗಳ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ನೋಡುವುದಿಲ್ಲ ಕಾಂಗ್ರೆಸ್ ‌ಪಕ್ಷದ ವಿಚಾರ ದೇಶ ಯಾವ ರೀತಿ ಇರಬೇಕೆಂದು ಇರುತ್ತದೆ. ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳನ್ನು ಇಡೀ ದಿನ ಇದ್ದು ಪರಿಶೀಲಿಸುವೆ ಎಂದರು.

ಕಾಂಗ್ರೆಸ್ ಅಧಿವೇಶನದ ದಿನವೇ ಬಿಜೆಪಿಯಿಂದ ಬೆಳಗಾವಿ ಜಾಥಾ ನಡೆಸುವ ವಿಚಾರವಾಗಿ ಮಾತನಾಡಿದ ಅವರು, ಬಿಜೆಪಿಯ ಬೆಳಗಾವಿ ಜಾಥಾ ಬಗ್ಗೆ ಈಗ ಯಾಕೆ ಮಾತು, ಬಿಜೆಪಿಯವರು ಬೆಳಗಾವಿಗೆ ಯಾರನ್ನಾದರೂ ಕಳಿಸಲಿ, ನಮ್ಮ ಶಕ್ತಿ ಅವರಿಗೂ ಗೊತ್ತಿದೆ ಎಂದು ಬಿಜೆಪಿಗೆ ಡಿಕೆಶಿ ಟಾಂಗ್ ಕೊಟ್ಟರು.

ಡಿಸೆಂಬರ್ 26 ಹಾಗೂ 27 ಕ್ಕೆ ಎರಡು ದಿನಗಳ ಕಾಲ ಕಾರ್ಯಕ್ರಮ ಇರುತ್ತವೆ. ಅದೇ ದಿನ ಬೆಳಿಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಸೋನಿಯಾ, ರಾಹುಲ್, ಪ್ರಿಯಾಂಕಾ ಆದಿಯಾಗಿ ಎಲ್ಲ ಕಾಂಗ್ರೆಸ್ ನಾಯಕರು ಬೆಳಗಾವಿಗೆ ಬರುತ್ತಾರೆ. 26 ಕ್ಕೆ ಅಧಿಕೃತ ಕಾರ್ಯಕ್ರಮಗಳು ನಡೆಯುತ್ತವೆ. ಕೆಲ ಪಕ್ಷದ ಕಾರ್ಯಕ್ರಮಗಳ ಉದ್ಘಾಟನೆ ಇರಲಿವೆ. ಡಿ. 26 ಕ್ಕೆ ಮಧ್ಯಾಹ್ನ 3ಕ್ಕೆ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಇರಲಿದೆ. ಡಿ. 27 ಕ್ಕೆ ಬೆಳಗ್ಗೆ ಸುವರ್ಣಸೌಧದಲ್ಲಿ ಗಾಂಧಿ ಪುತ್ಥಳಿ ಉದ್ಘಾಟನೆ ನೆರವೇರಲಿದೆ. ಅದೇ ದಿನ ಮಧ್ಯಾಹ್ನ ಸಿಪಿಎಡ್ ಮೈದಾನದಲ್ಲಿ ಸಮಾವೇಶ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಖರ್ಗೆ, ಗಾಂಧಿ ಕುಟುಂಬ ಎರಡೂ ದಿನ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಗಾಂಧಿ ಕುಟುಂಬ ತಂಗಲು ಹೋಟೆಲ್‌ಗಳನ್ನು ಬುಕ್ ಮಾಡಲಾಗಿದೆ. ಭದ್ರತೆ ನೋಡಿಕೊಂಡು ಪೊಲೀಸರು ನಿರ್ಧರಿಸುತ್ತಾರೆ. ಸಿಎಂಗಳು ವಿಟಿಯು ಗೆಸ್ಟ್ ಹೌಸ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದರು.

Edited By : Suman K
PublicNext

PublicNext

24/12/2024 12:44 pm

Cinque Terre

27.04 K

Cinque Terre

2

ಸಂಬಂಧಿತ ಸುದ್ದಿ