ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಳಲ್ಕೆರೆ : ತಾಲ್ಲೂಕಿನಲ್ಲಿ ಹಸಿ ಅವರೇಕಾಯಿ ಋತು ಆರಂಭ

ಹೊಳಲ್ಕೆರೆ : ಚಳಿಗಾಲ ಬಂತೆಂದರೆ ಎಲ್ಲೆಲ್ಲೂ ಹಸಿ ಅವರೆಕಾಯಿಯ ಘಮ. ತಾಲ್ಲೂಕಿನಲ್ಲಿ ಹಸಿ ಅವರೆಕಾಯಿ ಋತು ಆರಂಭವಾಗಿದ್ದು, ಪರಿಮಳ ಈಗಾಗಲೇ ಹರಡಿದೆಹೊರಕೆರೆ ದೇವರಪುರ, ತಾಳ್ಯ ಭಾಗದಲ್ಲಿ ಕಪ್ಪು ಮಣ್ಣು ಇರುವುದರಿಂದ ಹೆಚ್ಚು ಅವರೆ ಬೆಳೆಯಲಾಗುತ್ತದೆ. ಇಲ್ಲಿಂದ ನಿತ್ಯವೂ 300 ರಿಂದ 500 ಚೀಲ ಹಸಿ ಅವರೆಕಾಯಿ ಬೆಂಗಳೂರು ಮಾರುಕಟ್ಟೆ ತಲುಪುತ್ತದೆ.

ಬಿ.ದುರ್ಗ, ಕಸಬಾ, ರಾಮಗಿರಿ ಹೋಬಳಿಯಲ್ಲೂ ಅವರೆ ಕಟಾವಿಗೆ ಬಂದಿದೆ. ಸುತ್ತಲಿನ ನಂದನ ಹೊಸೂರು, ಕಸವನ ಹಳ್ಳಿ, ಗೊಲ್ಲರ ಹಟ್ಟಿ, ಸಂಗೇನ ಹಳ್ಳಿ, ಹೊಸಹಟ್ಟಿ, ನಗರಘಟ್ಟ, ಈಚಘಟ್ಟ, ಬಿ.ಜಿ.ಹಳ್ಳಿ, ಬ್ರಹ್ಮಪುರ, ನುಲೇನೂರು, ತೊಡರನಾಳು, ತಾಳ್ಯ, ಮದ್ದೇರು ಗ್ರಾಮಗಳಲ್ಲಿ ಬೆಳೆಯ ಪ್ರದೇಶ ವ್ಯಾಪಿಸಿದೆ.

ನಾಟಿ ಅವರೆಗೆ ಹೆಚ್ಚು ಬೇಡಿಕೆ: ಈಗ ವರ್ಷದ ಎಲ್ಲ ಕಾಲದಲ್ಲೂ ಹಸಿ ಅವರೆಕಾಯಿ ಸಿಗುತ್ತದೆ. ಕೆಲವು ರೈತರು ಹೈಬ್ರಿಡ್ ತಳಿಯ 'ಹೆಬ್ಬಾಳ ಅವರೆ' ಬೆಳೆಯುತ್ತಾರೆ. ಆದರೆ ಅದರಲ್ಲಿ ಸೊಗಡು, ರುಚಿ ಹೆಚ್ಚು ಇರುವುದಿಲ್ಲ. ಆದರೆ ಚಳಿಗಾಲಕ್ಕೆ ಬರುವ ನಾಟಿ ಅವರೆ ಹೆಚ್ಚು ರುಚಿಕರವಾಗಿರುವುದರಿಂದ ಹೆಚ್ಚು ಬೇಡಿಕೆ ಇರುತ್ತದೆ.

Edited By : PublicNext Desk
Kshetra Samachara

Kshetra Samachara

23/12/2024 06:55 pm

Cinque Terre

420

Cinque Terre

0