ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಭರಮಸಾಗರದ 3 ಮನೆಗಳಲ್ಲಿ ಕಳ್ಳತನ

ಚಿತ್ರದುರ್ಗ: ಚಿತ್ರದುರ್ಗ ತಾಲ್ಲೂಕಿನ ಭರಮಸಾಗರ ಪಟ್ಟಣದಲ್ಲಿ ಭಾನುವಾರ ತಡರಾತ್ರಿ ಘಟನೆ ನಡೆದಿದ್ದು ಸೋಮವಾರ ಬೆಳಗ್ಗೆ ಪ್ರಖರಣ ಬೆಳಕಿಗೆ ಬಂದಿದೆ.

ಐದು ಮನೆಗಳಲ್ಲಿ ಒಟ್ಟು ಸುಮಾರು 50 ಗ್ರಾಂ ಬಂಗಾರ ಹಾಗೂ 5 ಸಾವಿರದಷ್ಟು ನಗದು ಹಣವನ್ನ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಮನೆಯಲ್ಲಿ ಯಾರು ಇರದ್ದನ್ನ ಗಮನಿಸಿದ ಕಳ್ಳರು ಮನೆಯ ಬೀಗ ಮುರಿದು ಒಳ ಹೊಕ್ಕಿದ್ದು ಬಂಗಾರದ ಒಡವೆ ಮಕ್ಕಳ ಕೊರಳಿನ ಚೈನ್ ಸೇರಿದಂತೆ 50 ಗ್ರಾಂ ನಷ್ಟು ಬಂಗಾರದ ಒಡವೆ ಹಾಗೂ 5 ಸಾವಿರ ನಗದನ್ನ ಕದ್ದು ಪರಾರಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಭರಮಸಾಗರ ಠಾಣಾ ಪೊಲೀಸರು ಶ್ವಾನ ದಳದ ಜೊತೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಸಂಬಂಧ ಪ್ರಖರಣ ದಾಖಲಿಸಿಕೊಂಡಿದ್ದು ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

23/12/2024 06:30 pm

Cinque Terre

460

Cinque Terre

0

ಸಂಬಂಧಿತ ಸುದ್ದಿ