ಚಳ್ಳಕೆರೆ: ಗ್ರಾಮೀಣ ಜನಜೀವನದಲ್ಲಿ ಜಾನಪದ ಕಲೆಗೆ ಕೊರತೆ ಇಲ್ಲ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ, ರಂಗಭೂಮಿ ಕಲಾವಿದ ಕೆ.ಪಿ. ಭೂತಯ್ಯ ಹೇಳಿದರು.
ಚಳ್ಳಕೆರೆ ತಾಲೂಕಿನ ಭತ್ತಯ್ಯನಹಟ್ಟಿ ಗ್ರಾಮದಲ್ಲಿ ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾಲ್ಮೀಕಿ ಭಜನಾ ಕಲಾ ಸಂಘ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಜಾನಪದ ಸಂತೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.
ಆಧುನಿಕತೆ ಬೆಳೆದಂತೆ ಜನಪದ ಕಲಾವಂತಿಕೆ ನಶಿಸುತ್ತಿದೆ. ಆದರೂ, ಹಳ್ಳಿಗಳಲ್ಲಿ ಯಾವ ನಿರ್ದೇಶಕರಿಲ್ಲದಿದ್ದರೂ ಜಾನಪದ ಕಲೆಯಲ್ಲಿ ಪರಿಣಿತರಿದ್ದಾರೆ. ಈಗಲೂ ಕೃಷಿ ಚಟುವಟಿಕೆಗಳಲ್ಲಿ ಬೇಸರಿಕೆ ಕಳೆಯಲು ಜನಪದ, ತತ್ವಪದ ಕಲಾವಿದರಿದ್ದಾರೆ. ಇತ್ತೀಚಿನ ದಿನಗಳಲ್ಲಿ ಭಜನೆ ಪಾಂಡಿತ್ಯದಲ್ಲಿ ಮುಖ್ಯವಾಹಿನಿಗೆ ಬರುತ್ತಿರುವ ಕಲಾವಿದರಿದ್ದಾರೆ. ಗ್ರಾಮೀಣ ಭಾಗದ ಕಲಾವಿದರನ್ನು ಪ್ರೋತ್ಸಾಹಿಸುವ ಮತ್ತು ಮುಖ್ಯವಾಹಿನಿಗೆ ತರುವ ಕೆಲಸ ಆಗಬೇಕು. ಇದಕ್ಕೆ ಸಂಬAಧಿಸಿದ ಸರ್ಕಾರಿ ಇಲಾಖೆಗಳು ಪಾರದರ್ಶಕವಾಗಿ ಅರ್ಹ ಕಲಾವಿದರ ಬದುಕಿನ ಸಾಮಾಜಿಕ ಭದ್ರತೆ ಕಾಪಾಡಬೇಕಿದೆ ಎಂದು ಮನವಿ ಮಾಡಿದರು.
Kshetra Samachara
23/12/2024 08:15 pm