ಮೊಳಕಾಲ್ಮುರು:ಪಟ್ಟಣದ ತಾಲೂಕು ಆಡಳಿತ ಸೌಧ ಸಭಾಂಗಣದಲ್ಲಿ 2024-25 ನೇ ಸಾಲಿನ ನವೆಂಬರ್ ಅಂತ್ಯದವರೆಗಿನ ತಾಪಂ ಪ್ರಗತಿಪರಿಶೀಲನೆ ಸಭೆ ನಡೆಯಿತು.
ಸಭೆಯಲ್ಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಮಾತನಾಡಿ,ಆರ್ಥಿಕ ವರ್ಷದ ಕೊನೆ ಸಮಯ ಸಮೀಪಿಸುತ್ತಿದೆ, ಹಾಗಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಈಗಾಗಲೇ ತಮಗೆ ನೀಡಿರುವ ಪ್ರಗತಿಯ ಗುರಿಯನ್ನು ಖಡಾಯವಾಗಿ ತಲುಪಬೇಕಿದೆ. ಈ ಗುರಿ ತಲುಪಲು ಸಾಧ್ಯವಾಗದವರು ತಾಲೂಕಿಗೆ ಗುಡ್ ಬೈ ಹೇಳಿ ವರ್ಗಾವಣೆ ಮಾಡಿಸಿಕೊಳ್ಳಬಹುದು ಈ ವರ್ಗಾವಣೆಗೆ ನಾನು ಶಿಫಾರಸ್ಸು ಪತ್ರ ನೀಡುತ್ತೇನೆ ಎಂದು ಹೇಳಿದರು.
ಕ್ಷೇತ್ರ ವ್ಯಾಪ್ತಿಯಲ್ಲಿನ ಅನೇಕ ಸಮಸ್ಯೆಗಳನ್ನು ಖದ್ದು ಪರಿಶೀಲಿಸಿ ಅಭಿವೃದ್ಧಿಗೆ ಆಧ್ಯತೆ ನೀಡುತ್ತಿದ್ದೇನೆ. ಈಗಾಗಲೇ ಅಂದಾಜು ನೂರು ಕೋಟಿ ರೂ ಅನುದಾನದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಕೆಎಂಇಆರ್ ಯೋಜನೆಯಡಿ ಮುಂಜೂರಾದ ಅನುದಾನವನ್ನು ಶಿಕ್ಷಣ, ಆರೋಗ್ಯ ಪಿಡಬ್ಲ್ಯೂಡಿ ಸೇರಿದಂತೆ ಇನ್ನಿತರ ಇಲಾಖೆಗಳ ಸಮಸ್ಯೆಗಳನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಆಧ್ಯತೆ ಮೇರೆಗೆ ಬಳಕೆ ಮಾಡಲಾಗುತ್ತಿದೆ ಎಂದರು.
ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
Kshetra Samachara
23/12/2024 05:33 pm