ನವಲಗುಂದ: ಪಟ್ಟಣದಲ್ಲಿ ನೂತನವಾಗಿ ಅನುಷ್ಠಾನಗೊಳಿಸುತ್ತಿರುವ 24X7 ಕುಡಿಯುವ ನೀರಿನ ಕಾಮಗಾರಿ ಪ್ರಗತಿಯನ್ನು ಶಾಸಕ ಎನ್.ಎಚ್.ಕೋನರಡ್ಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಅವರು ಮೊದಲನೇ ಹಂತದ ಒಂದನೇ ವಲಯದಲ್ಲಿ ಪ್ರಾಯೋಗಿಕ ನೀರು ಪೂರೈಕೆಯು ಮಾರ್ಚ್ ತಿಂಗಳ ಅಂತ್ಯದವರೆಗೆ ಕಾಮಾಗರಿ ಪೂರ್ಣಗೊಳಿಸಿ ಪ್ರತಿ ವಾರ್ಡ್ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದಲ್ಲಿ 24X7 ನೀರು ಪೂರೈಕೆಯಾಗುವಂತೆ ಕ್ರಮ ವಹಿಸಲು ಅಧಿಕಾರಿಗಳಿಗೆ ತಿಳಿಸಿದರು. ನಳಜೋಡಣೆ ಕಾಮಗಾರಿಗಾಗಿ ರಸ್ತೆ ಅಗೆದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗುತ್ತಿದ್ದು, ಸಾರ್ವಜನಿಕ ದೂರಿನ ಹಿನ್ನಲೆ ಹದಗೆಟ್ಟ ರಸ್ತೆ ದುರಸ್ಥಿಗೊಳಸಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಸೂಚಸಿದರು.
ಪುರಸಭೆ ಮುಖ್ಯಾಧಿಕಾರಿ ಎಸ್.ಬಿ.ಪೂಜಾರ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರಾದ ಜೀವನ ಪವಾರ, ಮೋದಿನ ಶಿರೂರ, ಬಾಬಾಜಾನ ಮಕಾನದಾರ, ಹನುಮಂತ ವಾಲಿಕರ, ಗುತ್ತಿಗೆದಾರರಾದ ಸಂತೋಷ ಪಾಟೀಲ, ಮಂಜು ಗಾಣಿಗೇರ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.
Kshetra Samachara
23/12/2024 04:14 pm