ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಆಸ್ತಿ ಹಾಗೂ ಟ್ರ್ಯಾಕ್ಟರ್‌ಗಾಗಿ ಗಲಾಟೆ, ತಮ್ಮನ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಕೊಂದ ಅಣ್ಣ

ಬೆಳಗಾವಿ: ಪಿತ್ರಾರ್ಜಿತ ಆಸ್ತಿ ಹಾಗೂ ಟ್ರ್ಯಾಕ್ಟರ್ ವಿಚಾರಕ್ಕೆ ಬೆಳಗಾವಿಯಲ್ಲಿ ರಕ್ತವೇ ಹರಿದು ಹೋಗಿದೆ. ಸಹೋದರರ ನಡುವಿನ ಮೂರು ವರ್ಷದ ಜಗಳ ಭೀಕರ ಕೊಲೆಯಲ್ಲಿ ಅಂತ್ಯವಾಗಿದ್ದು, ಕೃಷಿಗೆ ಅನುಕೂಲ ಆಗಲಿ ಎಂದು ಅಪ್ಪ ಖರೀದಿಸಿದ ಟ್ರ್ಯಾಕ್ಟರ್ ಹಾಯಿಸಿ ಅಣ್ಣನೊಬ್ಬ ತಮ್ಮನ ಕೊಲೆ ಮಾಡಿದ್ದಾನೆ.

ಈ ಫೋಟೋದಲ್ಲಿ ಇರೋ ವ್ಯಕ್ತಿಯ ಹೆಸರು ಗೋಪಾಲ(27 ವರ್ಷ). ಮದುವೆಯಾಗಿ ಏಳು ವರ್ಷ ಕಳೆದ್ರೂ ಮಕ್ಕಳಾಗಿರಲಿಲ್ಲ. ವಿಪರೀತ ಕುಡಿತದ ಚಟಕ್ಕೆ ದಾಸನಾಗಿದ್ದ ಈತ ಕುಟುಂಬದಲ್ಲಿ ಯಾರೊಂದಿಗೂ ಉತ್ತಮ ಸಂಬಂಧ ಹೊಂದಿರಲಿಲ್ಲ. ಇತ್ತೀಚಿಗೆ ಗ್ರಾಮವನ್ನು ಬಿಟ್ಟು ಪತ್ನಿಯ ಮನೆಯನ್ನು ಸೇರಿದ್ದನು. ಆಗೊಮ್ಮೆ ಈಗೊಮ್ಮೆ ಊರಿಗೆ ಬಂದು ಸಹೋದರ ಮಾರುತಿ ಬಳಿಯಲ್ಲಿ ಜಗಳವಾಡುತ್ತಿದ್ದನು. ನನಗೆ ಆಸ್ತಿಯಲ್ಲಿ ಪಾಲು ಕೊಡು, ನಾನು ಅಪ್ಪನ ಮುದ್ದಿನ ಮಗ. ಅಪ್ಪ ಖರೀದಿ ಮಾಡಿದ ಟ್ರ್ಯಾಕ್ಟರ್ ನನಗೆ ಕೊಡು ಎಂದು ಪೀಡಿಸುತ್ತಿದ್ದನು.

ಕಳೆದ ಮೂರು ವರ್ಷಗಳಿಂದ ಕುಟುಂಬದಲ್ಲಿ ನಿರಂತರವಾಗಿ ಜಗಳ ನಡೆದಿದೆ. ಇದರಿಂದ ರೋಸಿ ಹೋಗಿದ್ದ ಗೋಪಾಲ ಅಣ್ಣ ಮಾರುತಿ ನಿನ್ನೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದನು. ಅಲ್ಲಿಗೆ ಹೋಗಿದ್ದ ಗೋಪಾಲ ಅಣ್ಣನ ಜೊತೆಗೆ ಜಗಳಕ್ಕೆ ಇಳಿದಿದ್ದಾನೆ. ಇದರಿಂದ ಆಕ್ರೋಶಗೊಂಡ ಮಾರುತಿ, ಟ್ರ್ಯಾಕ್ಟರ್ ಹಾಯಿಸಿ ತಮ್ಮನನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಹಿಗ್ಗಾಮುಗ್ಗಾ ಟ್ರ್ಯಾಕ್ಟರ್ ಓಡಿಸಿದ್ದು, ಚಕ್ರಕ್ಕೆ ಸಿಲುಕಿ ಗೋಪಾಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದು ಕುಟುಂಬಸ್ಥರಿಗೆ ದೊಡ್ಡ ಆಘಾತ ನೀಡಿದೆ.

ಯರಗಟ್ಟಿ ಪಟ್ಟಣದ ಸುತ್ತಮುತ್ತ 28 ಎಕರೆ ಜಮೀನು ಹೊಂದಿದ್ದ ಕುಟುಂಬವಿದೆ. ಮೃತ ಗೋಪಾಲ ತಂದೆ ಕೃಷಿ ಕೆಲಸಕ್ಕೆ ಅನಕೂಲ ಆಗಲಿ ಎಂದು ಟ್ರ್ಯಾಕ್ಟರ್ ವೊಂದನ್ನು ಖರಿದೀಸಿದ್ದನು. ಇದಾದ ಬಳಿಕ ಮೂರು ತಿಂಗಳಲ್ಲಿಯೇ ಕೋವಿಡ್ ನಿಂದ ತಂದೆ ಮೃತಪಟ್ಟಿದ್ದನು. ಬಳಿಕ ಮನೆಯಲ್ಲಿ ಆಸ್ತಿ, ಟ್ರ್ಯಾಕ್ಟರ್ ಬಗ್ಗೆ ಗಲಾಟೆಗಳು ಆರಂಭವಾಗಿವೆ. ಗೋಪಾಲ ನನಗೆ ಆಸ್ತಿಯಲ್ಲಿ ಪಾಲು ಕೊಡಿ ಎಂದು ಪಟ್ಟು ಹಿಡಿದಿದ್ದನು. ಇದು ಕುಟುಂಬದ ನೆಮ್ಮದಿಯನ್ನು ಹಾಳು ಮಾಡಿತ್ತು. ಸಹೋದರರ ಇಬ್ಬರ ನಡುವಿನ ಗಲಾಟೆ ನಿನ್ನೆ ವಿಕೋಪಕ್ಕೆ ಹೋಗಿದ್ದು ಕೊಲೆಯಲ್ಲಿ ಅಂತ್ಯವಾಗಿದೆ. ಜಮೀನಿನಲ್ಲಿ ಅಣ್ಣ, ತಮ್ಮನ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಅಲ್ಲಿಂದ ಇದು ವಿಕೋಪಕ್ಕೆ ತಿರುಗಿದೆ. ಗೋಪಾಲ ಮೇಲೆ ಟ್ರ್ಯಾಕ್ಟರ್ ಹಾಯಿಸಿ ಕೊಲೆ ಮಾಡಿದ ಮಾರುತಿ(30) ಬಳಿಕ ಮುರುಗೋಡು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಸದ್ಯ ಆರೋಪಿಯನ್ನು ಬಂಧನ ಮಾಡಿರೋ ಪೊಲೀಸರು ಮತ್ತಷ್ಟು ತನಿಖೆ ಆರಂಭ ಮಾಡಿದ್ದಾರೆ.

ಒಟ್ಟಾರೆಯಾಗಿ ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿಕೊಂಡು ಹೋಗಬೇಕಿದ್ದ ಮಕ್ಕಳು, ಇದೇ ವಿಚಾರಕ್ಕೆ ಕಿತ್ತಾಡಿಕೊಂಡಿದ್ದಾರೆ. ಸದ್ಯ ಒಬ್ಬ ಮಗ ಸತ್ತು ಹೋದ್ರೆ, ಇನ್ನೊಬ್ಬ ಜೈಲು ಪಾಲಾಗಿದ್ದಾನೆ. ಮೃತ ಗೋಪಾಲ ತಾಯಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಸಹೋದರರು ಜಗಳವಾಡಿಕೊಂಡು ಕೊಲೆ ಮಾಡೋ ಹಂತಕ್ಕೆ ಹೋಗಿದ್ದಾರೆ. ಆಸ್ತಿ, ಟ್ರ್ಯಾಕ್ಟರ್ ವಿವಾದ ಭೀಕರ ಕೊಲೆಯಲ್ಲಿ ಅಂತ್ಯವಾಗಿದ್ದು, ಇಡೀ ಕುಟುಂಬ ಕಣ್ಣಿರು ಹಾಕುವಂತೆ ಆಗಿದೆ.

-ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ

Edited By : Shivu K
PublicNext

PublicNext

22/12/2024 07:55 pm

Cinque Terre

10.69 K

Cinque Terre

0

ಸಂಬಂಧಿತ ಸುದ್ದಿ